alex Certify ಅಪಹರಣಗೊಂಡಿದ್ದ ಮಗುವಿಗೆ ಎದೆ ಹಾಲು ಕುಡಿಸಿ ಮಾನವೀಯತೆ ಮೆರೆದ ಮಹಿಳಾ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಹರಣಗೊಂಡಿದ್ದ ಮಗುವಿಗೆ ಎದೆ ಹಾಲು ಕುಡಿಸಿ ಮಾನವೀಯತೆ ಮೆರೆದ ಮಹಿಳಾ ಪೊಲೀಸ್

ತನ್ನ ತಂದೆಯಿಂದಲೇ ಅಪಹರಣಗೊಂಡಿದ್ದ 12 ದಿನದ ಪುಟ್ಟ ಮಗುವನ್ನು ಪೊಲೀಸರು ರಕ್ಷಿಸಿದ್ದು, ಆದರೆ ಬಹಳ ಸಮಯದವರೆಗೆ ಆತ ಆಹಾರ ನೀಡದೆ ಇದ್ದ ಕಾರಣ ನಿತ್ರಾಣಗೊಂಡಿದ್ದ ಮಗುವಿಗೆ ಮಹಿಳಾ ಪೊಲೀಸರೊಬ್ಬರು ಎದೆ ಹಾಲು ಕುಡಿಸಿ ಮಾನವೀಯತೆ ಮೆರೆದಿದ್ದಾರೆ.

ಇಂತಹದೊಂದು ಘಟನೆ ಕೇರಳದಲ್ಲಿ ನಡೆದಿದ್ದು, ಪೂಲಾಕ್ಕಡವು ನಿವಾಸಿ ಆಶಿಖಾ ಎಂಬವರು ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಕೆಯ ಪತಿ ಆದಿಲ್ ಮಗುವನ್ನು ಅಪಹರಿಸಿದ್ದ. ಹೀಗಾಗಿ ಆಶಿಖಾ ಚೆವಾಯೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಪಹೃತ ಮಗುವಿನ ಪತ್ತೆಗೆ ಮುಂದಾದ ಪೊಲೀಸರಿಗೆ ಮಹಿಳೆಯ ಪತಿ ಹಸುಗೂಸನ್ನು ಸುಲ್ತಾನ್ ಬತೇರಿಗೆ ಕರೆದುಕೊಂಡು ಹೋಗಿದ್ದು ತಿಳಿದು ಬಂದಿತ್ತು. ಅಲ್ಲದೆ ಅಲ್ಲಿಂದ ಬೆಂಗಳೂರಿಗೆ ರವಾನಿಸಲು ಸಿದ್ಧತೆ ನಡೆಸಿದ್ದ. ದಾಳಿ ನಡೆಸಿದ ಪೊಲೀಸರು ಮಗುವನ್ನು ರಕ್ಷಿಸಿದ್ದು, ಆದರೆ ಮಗು ತೀವ್ರವಾಗಿ ನಿತ್ರಾಣಗೊಂಡಿತ್ತು. ಈ ವೇಳೆ ಪೊಲೀಸ್ ಅಧಿಕಾರಿ ರಮ್ಯಾ ಅವರು ಠಾಣೆಯಲ್ಲಿಯೇ ಮಗುವಿಗೆ ಎದೆ ಹಾಲು ಕುಡಿಸಿ ಎಲ್ಲರ ಮನೆಗೆದ್ದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...