alex Certify ಹಿಮೋಗ್ಲೋಬಿನ್ ಸಮಸ್ಯೆ ದೂರ ಮಾಡುತ್ತೆ ಈ ‘ಆಹಾರ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮೋಗ್ಲೋಬಿನ್ ಸಮಸ್ಯೆ ದೂರ ಮಾಡುತ್ತೆ ಈ ‘ಆಹಾರ’

ಹಿಮೋಗ್ಲೋಬಿನ್ ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದ್ರೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ದೇಹದ ಎಲ್ಲ ಭಾಗಕ್ಕೂ ಸರಿಯಾಗಿ ಆಮ್ಲಜನಕ ಹೋಗುವುದಿಲ್ಲ. ರಕ್ತದಲ್ಲಿರು ಕೆಂಪು ಜೀವಕೋಶಗಳ ಸಂಖ್ಯೆ ಕಡಿಮೆಯಾಗುತ್ತದೆ. ಜೊತೆಗೆ ರಕ್ತಹೀನತೆ ಸಮಸ್ಯೆ ಕಾಡುತ್ತದೆ.

ಇದೆಲ್ಲದರಿಂದ ರಕ್ಷಣೆ ಬೇಕಾದಲ್ಲಿ ನಾವು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಸಮ ಪ್ರಮಾಣದಲ್ಲಿಟ್ಟುಕೊಳ್ಳಬೇಕು. ನಾವು ತಿನ್ನುವ ಆಹಾರದಲ್ಲಿಯೇ ನಮ್ಮ ದೇಹಕ್ಕೆ ಬೇಕಾಗುವಷ್ಟು ಹಿಮೋಗ್ಲೋಬಿನ್ ಸಿಗುತ್ತದೆ. ಹಿಮೋಗ್ಲೋಬಿನ್ ಸಮಸ್ಯೆಯಿಂದ ಬಳಲುವವರು ಹೆಚ್ಚಿನ ಪ್ರಮಾಣದಲ್ಲಿ ಹಿಮೋಗ್ಲೋಬಿನ್ ಇರುವ ಆಹಾರವನ್ನು ಸೇವನೆ ಮಾಡಬೇಕು.

ಪೇರಳೆ ಹಣ್ಣು : ಒಂದು ಪೇರಳೆ ಹಣ್ಣು ಮೂರು ಸೇಬು ಹಣ್ಣಿಗೆ ಸಮ. ಪೇರಳೆಹಣ್ಣು ತಿನ್ನುತ್ತಿದ್ದರೆ ಹಿಮೋಗ್ಲೋಬಿನ್ ಸಮಸ್ಯೆ ಕಾಡುವುದಿಲ್ಲ. ಇದ್ರಲ್ಲಿ ಪೌಷ್ಠಿಕಾಂಶ ಹೆಚ್ಚಿರುವುದರಿಂದ  ಪ್ರತಿದಿನ ಒಂದು ಹಣ್ಣು ತಿನ್ನುವುದು ಉತ್ತಮ.

ಬೀಟ್ರೋಟ್ : ಬೀಟ್ರೋಟ್ ಹಿಮೋಗ್ಲೋಬಿನ್ ಗೆ ಉತ್ತಮ ಮೂಲ. ಊಟದ ಜೊತೆಗೆ ಸಲಾಡ್ ರೀತಿಯಲ್ಲಿ ಬೀಟ್ರೋಟ್ ತಿನ್ನುವುದು ಬೆಸ್ಟ್. ಇದು ಬಹುಬೇಗ ಹಿಮೋಗ್ಲೋಬಿನ್ ಸಮಸ್ಯೆಯನ್ನು ದೂರ ಮಾಡುತ್ತದೆ.

ದಾಳಿಂಬೆ: ದಾಳಿಂಬೆ ಕೂಡ ಹಿಮೋಗ್ಲೋಬಿನ್ ಸಮಸ್ಯೆಯನ್ನು ದೂರ ಮಾಡುತ್ತದೆ. ದೇಹದಲ್ಲಿ ರಕ್ತ ಉತ್ಪತ್ತಿ ಮಾಡಲು ಇದು ಸಹಕಾರಿ.

ಸೇಬು : ರಕ್ತ ಹೀನತೆಯನ್ನು ದೂರಮಾಡಲು ಸೇಬು ಸಹಕಾರಿ. ಪ್ರತಿದಿನ ಒಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು.

ತುಳಸಿ : ರಕ್ತಸ್ರಾವ ಕಡಿಮೆ ಮಾಡುವ ಸಂಜೀವಿನ ತುಳಸಿ. ಪ್ರತಿದಿನ ತುಳಸಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...