alex Certify ಲಾಟರಿಯಲ್ಲಿ 893 ಕೋಟಿ ರೂ. ಗೆದ್ದವನಿಗೆ ಈಗ‌ ಲೈಫ್ ಬಲು ಬೋರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಟರಿಯಲ್ಲಿ 893 ಕೋಟಿ ರೂ. ಗೆದ್ದವನಿಗೆ ಈಗ‌ ಲೈಫ್ ಬಲು ಬೋರ್…!

ಹಣ ಎಂದರೆ ಹೆಣವೂ ಬಾಯಿಬಿಡುತ್ತದೆ ಎನ್ನುವ ಮಾತು ತಲೆತಲಾಂತರಗಳಿಂದ ನಡೆದು ಬಂದಿದೆ. ಹಣಕ್ಕಾಗಿಯೇ ಎಲ್ಲರೂ ಇಷ್ಟೊಂದು ಪರದಾಡುವುದು ಎನ್ನುವ ಮಾತೂ ಸುಳ್ಳಲ್ಲ. ಹಾಗಿದ್ದರೆ ಸಾಮಾನ್ಯ ವ್ಯಕ್ತಿಯೊಬ್ಬನಿಗೆ ದಿಢೀರನೆ ಲಕ್ಷವಲ್ಲ, ಕೋಟಿಯಲ್ಲ, ನೂರಾರು ಕೋಟಿ ರೂಪಾಯಿ ದುಡಿಮೆ ಮಾಡದೇ ಸಿಕ್ಕಿಬಿಟ್ಟರೆ? ಇದನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೇ ಬಿಡಿ. ಹೀಗೇನಾದರೂ ಸಿಕ್ಕರೆ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎನ್ನುವವರೇ ಎಲ್ಲಾ.

ಆದರೆ ಇಲ್ಲೊಬ್ಬ ವ್ಯಕ್ತಿಗೆ ಮಾತ್ರ ನೂರಾರು ಕೋಟಿ ಹಣ ಸಿಕ್ಕ ಬಳಿಕ ಲೈಫೇ ಬೋರಾಗಿದೆಯಂತೆ! ಹೀಗೆಂದು ಇಂಗ್ಲೆಷ್​ ಮೂಲದ ವ್ಯಕ್ತಿಯೊಬ್ಬ ಹೇಳಿಕೊಂಡಿದ್ದು ಅದೀಗ ವೈರಲ್​ ಆಗಿದೆ.

2014 ರಲ್ಲಿ ಇಂಗ್ಲೆಂಡ್​ನ​ ಕಾರ್ ಮೆಕ್ಯಾನಿಕ್ ನೀಲ್​ಗೆ £ 107.9 ಮಿಲಿಯನ್ ಮೊತ್ತದ ಲಾಟರಿ ಹೊಡೆದಿತ್ತು. ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 893 ಕೋಟಿ ರೂ. ಈ ಪುಕ್ಕಟೆ ಹಣದಿಂದ ಎಷ್ಟು ಐಷಾರಾಮಿ ಜೀವನ ಸಾಧ್ಯವೋ ಅಷ್ಟು ಐಷಾರಾಮಿ ಜೀವನವನ್ನು ಈತ ನಡೆಸುತ್ತಿದ್ದಾನೆ. ಬೆಲೆಬಾಳುವ ಮಹಲು ಮತ್ತು ಸೂಪರ್‌ ಕಾರ್‌ಗಳನ್ನು ಹೊಂದಿರುವ ಈತನಿಗೆ ಈಗ ಈಗ ಐಷಾರಾಮಿ ಜೀವನವು ಸಾಕಷ್ಟು ನೀರಸ ಎನಿಸತೊಡಗಿದೆಯಂತೆ.

“ಲಾಟರಿ ಗೆದ್ದ ಬಳಿಕ ಐಷಾರಾಮಿ ಕಾರುಗಳನ್ನು ಖರೀದಿಸಿದೆ. ಸುಮಾರು 400 ಎಕರೆ ಜಮೀನಿನಲ್ಲಿ ಮಹಲನ್ನು ಕಟ್ಟಿಸಿದೆ. ಇದರಲ್ಲಿ ಏನೇನು ಸೌಲಭ್ಯಗಳು ಬೇಕೋ ಎಲ್ಲವೂ ಇದೆ. ನನ್ನ ಸ್ನೇಹಿತೆಯನ್ನೂ ಮದುವೆಯಾದೆ. ಮೊದಮೊದಲು ಈ ಐಷಾರಾಮಿ ಜೀವನ ತುಂಬಾ ಖುಷಿ ಕೊಟ್ಟಿತು. ಆದರೆ ಬರುಬರುತ್ತಾ ಇದು ಬೋರ್​ ಎನಿಸತೊಡಗಿದೆ. ಮೊದಲು ಕೆಲಸಕ್ಕೆ ಹೋಗುತ್ತಿದ್ದೆ. ಇಷ್ಟೆಲ್ಲಾ ದುಡ್ಡು ಬಂದ ಮೇಲೆ ಅದನ್ನು ಬಿಟ್ಟಿದ್ದೇನೆ. ಈಗ  ಕೆಲಸವಿಲ್ಲದೇ ಬೋರ್​ ಆಗುತ್ತಿದೆ. ಈ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ” ಎಂದು ನೀಲ್​ ಹೇಳಿಕೊಂಡಿದ್ದಾನೆ.

ಈಗ ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ ಎಂದಿರುವ ನೀಲ್​, ಮನುಷ್ಯನಿಗೆ ಇಷ್ಟೆಲ್ಲಾ ಒಂದೇ ಬಾರಿ ಸಿಕ್ಕಿಬಿಟ್ಟರೆ ಬದುಕೇ ದುಸ್ತರ ಎಂದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...