ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಮಾಧ್ಯಮ ಟ್ವಿಟ್ಟರ್, ತಾಂತ್ರಿಕ ದೋಷಗಳ ಕಾರಣಕ್ಕೆ ಗಂಟೆಗಳ ಕಾಲ ಬಳಕೆದಾರರು ಉಪಯೋಗಿಸದಂತೆ ಆಗಿತ್ತು.
ಈ ಕುರಿತಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಯನ್ನು ಬರೆದುಕೊಂಡಿದ್ದರು. ಬಳಿಕ ಇದಕ್ಕೆ ಸ್ಪಷ್ಟ ನೀಡಿದ್ದ ಟ್ವಿಟ್ಟರ್ ತಾಂತ್ರಿಕ ದೋಷದಿಂದ ಸಮಸ್ಯೆ ಎದುರಾಗಿದೆ ಕೆಲ ಹೊತ್ತಿನಲ್ಲೇ ಸರಿ ಹೋಗಲಿದೆ ಎಂದು ಹೇಳಿತ್ತು.
ಅದರಂತೆ ಒಂದೂವರೆಯಿಂದ ಎರಡು ಗಂಟೆಗಳ ಬಳಿಕ ಟ್ವಿಟರ್ ಸರಿ ಹೋಗಿದ್ದು, ಇದೀಗ ಇನ್ಸ್ಟಾಗ್ರಾಮ್ ಬಳಕೆದಾರರು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಕೆಲ ಹೊತ್ತಿನಿಂದ ಇನ್ಸ್ಟಾಗ್ರಾಮ್ ಬಳಕೆದಾರರು ಯಾವುದೇ ಫೋಟೋ ಹಾಗೂ ವಿಡಿಯೋ ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂಬ ಸಂದೇಶವೂ ಬಂದಿದೆ.
ಇದನ್ನು ಇತರೆ ಫ್ಲಾಟ್ ಫಾರ್ಮ್ ಗಳಲ್ಲಿ ಬಳಕೆದಾರರು ಹಂಚಿಕೊಂಡ ಬಳಿಕ ಸ್ಪಷ್ಟನೆ ನೀಡಿರುವ ಇನ್ಸ್ಟಾಗ್ರಾಮ್, ಆದ ತೊಂದರೆಗಾಗಿ ವಿಷಾದಿಸಿದೆ ಅಲ್ಲದೆ ಇದನ್ನು ಸರಿ ಮಾಡುವುದಾಗಿ ತಿಳಿಸಿದೆ.