ಡುಕಾಟಿ ಬೈಕ್‌ಗಳ ಬಗ್ಗೆ ಜನರಿಗೆ ಸಾಕಷ್ಟು ಕ್ರೇಝ್ ಇದೆ. ಅದಕ್ಕೆ ತಕ್ಕಂತೆ ಬೈಕ್ ವಿನ್ಯಾಸಗೊಳಿಸಿರೋ ಕಂಪನಿ 2023ರ Ducati Diavel V4 ಲುಕ್ ಅನ್ನು ರಿವೀಲ್ ಮಾಡಿದೆ. ಇದು V4, ಈ ಪವರ್ ಕ್ರೂಸರ್ ಇಟಾಲಿಯನ್ V4 ಗ್ರ್ಯಾಂಚುರಿಸ್ಮೊ ಎಂಜಿನ್ ಮತ್ತು ಗಮನಾರ್ಹ ಸ್ಟೈಲಿಂಗ್ ಬದಲಾವಣೆಗಳನ್ನು ಪಡೆದಿದೆ.
ಅಲ್ಯೂಮಿನಿಯಂ ಮೊನೊಕೊಕ್ ಫ್ರೇಮ್ ಮತ್ತು ಕ್ವಾಡ್ ಎಕ್ಸಾಸ್ಟ್ ಟಿಪ್ಸ್ ಇದರ ವಿಶೇಷತೆ. Ducati Diavel V4ಗೆ ಮಸ್ಕ್ಯುಲರ್ ಟ್ಯಾಂಕ್ ಮತ್ತು ಹೆಡ್‌ಲ್ಯಾಂಪ್‌ನ ಎರಡೂ ಬದಿಗಳಲ್ಲಿ ದೊಡ್ಡ ಗಾಳಿಯ ದ್ವಾರಗಳನ್ನು ಮಾಡಲಾಗಿದೆ. ಸ್ಕೂಪ್ಡ್ ಸೀಟ್, ಸ್ಲಿಮ್ ಟೈಲ್ ವಿಭಾಗ ಮತ್ತು ದೊಡ್ಡ ಹಿಂಬದಿ ಟೈರ್ ಜೊತೆಗೆ ಹಗ್ಗರ್, ಸಿಂಗಲ್ ಸೈಡೆಡ್ ಸ್ವಿಂಗ್ ಆರ್ಮ್ ಇವೆಲ್ಲವೂ ಈ ಮೋಟಾರ್ ಸೈಕಲ್‌ನ ವಿಶೇಷತೆ.
ಇದು ಹೊಸ ಎಲ್ಇಡಿ ಹೆಡ್‌ಲೈಟ್ ಮತ್ತು ಟೈಲ್ ವಿಭಾಗದ ಕೆಳಗೆ ಎಲ್ಇಡಿಗಳ ಕ್ಲಸ್ಟರ್ ಅನ್ನು ಹೊಂದಿದೆ. ಡೈಮಂಡ್-ಕಟ್ ಎಫೆಕ್ಟ್ ವಿನ್ಯಾಸವನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಈ ಬೈಕ್ ರೆಡ್ ಮತ್ತು ಥ್ರಿಲ್ಲಿಂಗ್ ಬ್ಲ್ಯಾಕ್ ಈ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಈ ಬೈಕ್‌ನಲ್ಲಿರುವ 1,158cc ಲಿಕ್ವಿಡ್-ಕೂಲ್ಡ್ V4 ಎಂಜಿನ್ ಹೆಚ್ಚುವರಿಯಾಗಿ ತಾಪ ಮತ್ತು ಇಂಧನ ಬಳಕೆಯನ್ನು ಪರಿಶೀಲಿಸಲು ಸಿಲಿಂಡರ್ ನಿಷ್ಕ್ರಿಯಗೊಳಿಸುವ ವ್ಯವಸ್ಥೆಯನ್ನೂ ಹೊಂದಿದೆ. ಅದು ಅಗತ್ಯವಿದ್ದಾಗ ಹಿಂದಿನ ಎರಡು ಸಿಲಿಂಡರ್‌ಗಳನ್ನು ಮುಚ್ಚುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರಲ್ಲಿ ಮೂರು ಪವರ್ ಮೋಡ್‌ಗಳು ಮತ್ತು ನಾಲ್ಕು ರೈಡ್ ಮೋಡ್‌ಗಳಿವೆ.
ಬ್ಲೂಟೂತ್, ಕ್ರೂಸ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಕಾರ್ನರ್ ಮಾಡುವ ABS, ಟ್ರಾಕ್ಷನ್ ಕಂಟ್ರೋಲ್ ಇವೆಲ್ಲವೂ ಇದರ ವಿಶೇಷತೆ. ಇದರ ತೂಕ ಸರಿಸುಮಾರು 211 ಕೆಜಿ. ಮೋಟಾರ್‌ಸೈಕಲ್ ಅಲ್ಯೂಮಿನಿಯಂ ಮೊನೊಕೊಕ್ ಫ್ರೇಮ್ ಅನ್ನು ಹೊಂದಿದೆ. ಹ್ಯಾಂಡಲ್‌ಬಾರ್‌ಗಳನ್ನು ಹೆಚ್ಚು ಆರಾಮದಾಯಕ ರೈಡಿಂಗ್ ಭಂಗಿಗಾಗಿ ಹತ್ತಿರದಲ್ಲಿ ಅಳವಡಿಸಲಾಗಿದೆ. ಈ ಮೋಟಾರ್ ಸೈಕಲ್ ಅನ್ನು ಡುಕಾಟಿ ಭಾರತದಲ್ಲಿ ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಇದರ ಬೆಲೆ ಅಂದಾಜು 20.49 ಲಕ್ಷ ರೂಪಾಯಿ ಇರಲಿದೆ.