ಕೆಲ ತಿಂಗಳ ಹಿಂದೆ ತಾಂಜೇನಿಯಾದ ಪ್ರಭಾವಿ ಕಿಲಿ ಪಾಲ್ ಅವರು ಹಾಡಿರುವ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಅವರ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದರು. ಈಗ ಅದೇ ಹುರುಪಿನಿಂದ ಮತ್ತೊಂದು ಹಾಡನ್ನು ಶೇರ್ ಮಾಡಿದ್ದು, ಈ ಬಾರಿ ಅವರೇ ಬಾಲಿವುಡ್ ಹಾಡು ಹಾಡಿದ್ದಾರೆ.
ಎಂದಿನಂತೆ ಸಾಂಪ್ರದಾಯಿಕ ಮಸಾಯಿ ಉಡುಪುಗಳನ್ನು ಧರಿಸಿರುವ ಕಿಲಿ ಮತ್ತೊಂದು ಪ್ರಸಿದ್ಧ ಬಾಲಿವುಡ್ ಹಾಡಿಗೆ ಲಿಪ್ ಸಿಂಕ್ ಮಾಡಿರುವುದು ಮಾತ್ರವಲ್ಲದೇ, ತಮ್ಮದೇ ಧ್ವನಿಯಲ್ಲಿ ಹಾಡಿದ್ದಾರೆ. ತಮ್ಮ ಅಮೋಘ ಕಲೆಯಿಂದಾಗಿ ಇದಾಗಲೇ 4.4 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಕಿಲಿ ಅವರು ತಮ್ಮ ನೈಜ ಧ್ವನಿಯನ್ನು ಬಹಿರಂಗಪಡಿಸಿದ್ದು ಇದೇ ಮೊದಲು.
“ನಿಮಗೆ ನನ್ನ ಧ್ವನಿ ಹೆಚ್ಚು ಬೇಕಾದರೆ ನನಗೆ ತಿಳಿಸಿ” ಎಂದು ಅವರು ಶೀರ್ಷಿಕೆಯಲ್ಲಿ ಹೇಳಿದ್ದಾರೆ. ಈ ಮೂಲಕ ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ಹಿಟ್ ಚಿತ್ರ ರಬ್ ನೇ ಬನಾ ದಿ ಜೋಡಿಯ ಸುಂದರವಾದ ಹಾಡು ‘ತುಜ್ ಮೇ ರಬ್ ದಿಖ್ತಾ ಹೈ’ ಅನ್ನು ಹಾಡಿದ್ದಾರೆ.
ಈ ವಿಡಿಯೋದಲ್ಲಿ ಅವರ ಮಗನನ್ನು ಕೂಡ ಕಾಣಬಹುದು. ಈ ವಿಡಿಯೋ ಇದಾಗಲೇ 1.6 ಮಿಲಿಯನ್ ವೀಕ್ಷಣೆಗಳನ್ನು ಮತ್ತು 256k ಲೈಕ್ಸ್ ಪಡೆದುಕೊಂಡಿವೆ.