alex Certify ಅತ್ಯಾಚಾರಿಯ ಸತ್ಸಂಗಕ್ಕೆ ಬಿಜೆಪಿ ಸಚಿವನ ನಂತರ ಈಗ ಆಮ್​ ಆದ್ಮಿಯ ಸಚಿವ….! ನೆಟ್ಟಿಗರ ಛೀಮಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರಿಯ ಸತ್ಸಂಗಕ್ಕೆ ಬಿಜೆಪಿ ಸಚಿವನ ನಂತರ ಈಗ ಆಮ್​ ಆದ್ಮಿಯ ಸಚಿವ….! ನೆಟ್ಟಿಗರ ಛೀಮಾರಿ

ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್​ನ ಸತ್ಸಂಗ ಕಾರ್ಯಕ್ರಮಕ್ಕೆ ಆಮ್​ ಆದ್ಮಿ ಪಕ್ಷದ ಸಚಿವ ಪಾಲ್ಗೊಂಡಿರುವ ವಿಡಿಯೋ ವೈರಲ್​ ಆಗಿದೆ.

ಇದಕ್ಕೂ ಮೊದಲು, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಹಿಮಾಚಲ ಸಾರಿಗೆ ಸಚಿವ ಬಿಕ್ರಮ್ ಠಾಕೂರ್ ಅವರು ಸತ್ಸಂಗದಲ್ಲಿ ಭಾಗವಹಿಸಿದ್ದರು. ಇದೀಗ ಆಪ್​ನ ಪಂಜಾಬ್​ನ ಸಚಿವ ಫೌಜಾ ಸಿಂಗ್​​ ಸರದಿ. ಸಾಮಾಜಿಕ ಜಾಲತಾಣದಲ್ಲಿ ಇದು ಭಾರಿ ಟೀಕೆಗೆ ಗುರಿಯಾಗಿದೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಿಂಗ್​ನನ್ನು 14 ದಿನಗಳ ಪರೋಲ್​ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಈತ ಆನ್‌ಲೈನ್ ಮತ್ತು ವೈಯಕ್ತಿಕ ಸತ್ಸಂಗಗಳನ್ನು ನಡೆಸುತ್ತಿದ್ದಾನೆ. ಇದರಲ್ಲಿ ಹಲವಾರು ಸಚಿವರು ಮತ್ತು ನಾಯಕರು ಭಾಗವಹಿಸುತ್ತಾರೆ. ಈತನ ದೊಡ್ಡ ಅಭಿಮಾನಿಗಳು ಹಾಗೂ ಅನುಯಾಯಿಗಳ ಬಳಗ ಇರುವ ಹಿನ್ನೆಲೆಯಲ್ಲಿ ಚುನಾವಣೆಯ ದೃಷ್ಟಿಯಿಂದ ನಾಯಕರು ಹೀಗೆ ಮಾಡುತ್ತಿರುವುದು ಟೀಕೆಗೆ ಗುರಿಯಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...