ಚಾಕಲೇಟ್ ತಯಾರಿಕಾ ಕ್ಯಾಡ್ಬರಿ ಕಂಪನಿ ದೀಪಾವಳಿ ಸಂದರ್ಭದಲ್ಲಿ ಜಾಹೀರಾತು ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಡ ವ್ಯಕ್ತಿ ಒಬ್ಬ ದೀಪ ಮಾರುವ ದೃಶ್ಯವಿದೆ. ಆ ವ್ಯಕ್ತಿಯ ಹೆಸರು ದಾಮೋದರ್ ಎಂದಾಗಿದ್ದು, ಇದೀಗ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಇದನ್ನು ಆಕ್ಷೇಪಿಸಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ತಂದೆಯ ಹೆಸರು ದಾಮೋದರ್ ಆಗಿದ್ದು, ಅವರನ್ನು ಲೇವಡಿ ಮಾಡುವುದಕ್ಕಾಗಿ ಜಾಹೀರಾತಿನಲ್ಲಿ ಈ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ಸಾದ್ವಿ ಪ್ರಾಚಿ ಟ್ವೀಟ್ ಮಾಡಿದ್ದು, ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ #BoycottCadbury ಟ್ರೆಂಡ್ ಶುರುವಾಗಿದೆ.
ಅಲ್ಲದೆ ಕೆಲವರು ಆಸ್ಟ್ರೇಲಿಯಾ ಕ್ಯಾಡ್ಬರಿ ವೆಬ್ ಸೈಟ್ ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಅದರಲ್ಲಿ ತನ್ನ ಉತ್ಪನ್ನದಲ್ಲಿ ಜೆಲಾಟಿನ್ ಇದ್ದರೆ ಅದು ಹಲಾಲ್ ಪ್ರಮಾಣಿಕೃತವಾಗಿದೆ ಹಾಗೂ ಅದನ್ನು ಗೋಮಾಂಸದಿಂದ ಪಡೆಯಲಾಗಿದೆ ಎಂದು ಬರೆಯಲಾಗಿದೆ. ಇದರಿಂದಾಗಿ ಬಾಯ್ಕಾಟ್ ಟ್ರೆಂಡ್ ಮತ್ತಷ್ಟು ಜೋರಾಗಿದೆ. ಆದರೆ 2021 ರಲ್ಲಿಯೇ ಭಾರತೀಯ ಕ್ಯಾಡ್ಬರಿ ಉತ್ಪನ್ನ ಶೇ.100 ರಷ್ಟು ಸಸ್ಯಾಹಾರಿ ಎಂದು ಕಂಪನಿ ಸ್ಪಷ್ಟನೆ ನೀಡಿತ್ತು.