alex Certify ಅರ್ಧ ದಿನ ನಗದೇ ಇರಲು ಪೊಲೀಸರ ನಿರ್ಧಾರ….! ಇದೆಂಥ ವಿಚಿತ್ರ ಅಂತೀರಾ ? ಈ ವೈರಲ್ ವಿಡಿಯೋ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಧ ದಿನ ನಗದೇ ಇರಲು ಪೊಲೀಸರ ನಿರ್ಧಾರ….! ಇದೆಂಥ ವಿಚಿತ್ರ ಅಂತೀರಾ ? ಈ ವೈರಲ್ ವಿಡಿಯೋ ನೋಡಿ

ಕೊಹಿಮಾ: ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರು ಕೆಲವೊಂದು ವೇಳೆ ರಿಲ್ಯಾಕ್ಸ್​ ಆಗಿರಲು ಕೆಲವೊಂದು ಆಟೋಟಗಳ ಮೊರೆ ಹೋಗುತ್ತಾರೆ. ಅದೇ ರೀತಿ ನಾಗಾಲ್ಯಾಂಡ್​ನ ಪೊಲೀಸರ ತಂಡವು ಒಂದು ಚಾಲೆಂಜ್​ ಸ್ಪರ್ಧೆ ಏರ್ಪಡಿಸಿ ಕರ್ತವ್ಯದೊತ್ತಡದಿಂದ ರಿಲ್ಯಾಕ್ಸ್​ ಆಗಲು ನೋಡಿದ್ದು, ಅದರ ವಿಡಿಯೋ ಈಗ ವೈರಲ್​ ಆಗಿದೆ.

ಈ ಪೊಲೀಸರು ಆಯ್ದುಕೊಂಡದ್ದು ನಗಬಾರದ ಚಾಲೆಂಜ್​! (ನೋ ಲಾಫ್ -No Laugh Challenge) ಇದನ್ನು ನಾಗಾಲ್ಯಾಂಡಿನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಅದೀಗ ವೈರಲ್​ ಆಗಿದೆ. ಅರ್ಧ ದಿನ ಈ ಆಟ ನಡೆದಿದ್ದು, ಪೊಲೀಸರು ನಗದಿರಲು ತೀರ್ಮಾನಿಸಿದ್ದರೂ ಅದು ಸಾಧ್ಯವಾಗಲಿಲ್ಲ.

ಈ ವಿಡಿಯೋದಲ್ಲಿ 12 ಜನ ಪೊಲೀಸರ ತಂಡ ‘ನೋ ಲಾಫ್ ಚಾಲೆಂಜ್’ ಆಟ ಆಡುತ್ತಿರುವುದನ್ನು ಕಾಣಬಹುದಾಗಿದೆ. ಒಬ್ಬೊಬ್ಬರಾಗಿ ಕೈಲಾಶ್ ಖೇರ್ ಅವರ ಪ್ರಸಿದ್ಧ ‘ಸೈಯಾನ್’ ಹಾಡನ್ನು ಹಾಡಿದ್ದಾರೆ. ಈ ವೇಳೆ ಯಾರು ನಗುತ್ತಾರೋ ಅವರ ತಲೆಗೆ ಎಲ್ಲರೂ ಕಾಗದದ ಕೋಲಿನಿಂದ ಹೊಡೆಯಬೇಕು ಎಂಬುದು ಆಟದ ನಿಯಮ.

ಈ ವಿಡಿಯೋ ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದು, ತಾವು ಕೂಡ ಇಂಥ ಆಟ ಆಡಿ ಮೂಡ್​ ರಿಲ್ಯಾಕ್ಸ್​ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...