ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿದ್ದರೆ ಯಾವುದೇ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಶಾಂತಿ, ಸುಖ ತುಂಬಿರುತ್ತದೆ. ಆದ್ರೆ ನಕಾರಾತ್ಮಕ ಶಕ್ತಿಯ ಪ್ರವೇಶವಾದ್ರೆ ಮನೆ ನರಕವಾಗಿ ಪರಿವರ್ತನೆಯಾಗುತ್ತೆ. ಸದಾ ಜಗಳ, ಗಲಾಟೆ, ಅಶಾಂತಿ, ಆರ್ಥಿಕ ಸಮಸ್ಯೆ ಕಾಡುತ್ತದೆ. ಕೆಲವೊಂದು ನಿಯಮಗಳನ್ನು ಪಾಲಿಸಿದ್ರೆ ನಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುವುದನ್ನು ತಪ್ಪಿಸಬಹುದು.
ಉಪ್ಪು ನೀರನ್ನು ಮನೆಯ ಎಲ್ಲ ಕೋಣೆಗೆ ಸಿಂಪಡಿಸಿ. ಇದರಿಂದ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ.
ಮನೆಯಲ್ಲಿ ಧೂಪ ಹಾಕುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ಇದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಸಂತೋಷ ನೆಲೆಸಿರುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಮನೆಯಲ್ಲಿ ಸಮೃದ್ಧಿ ಮನೆ ಮಾಡಿರುತ್ತದೆ.
ಪ್ರತಿದಿನ ಮನೆಯಲ್ಲಿ ಕರ್ಪೂರ ಹಾಗೂ ಲವಂಗದ ಧೂಪ ಹಾಕುವುದರಿಂದ ವಾಸ್ತು ದೋಷ ದೂರವಾಗುತ್ತದೆ.
ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾದಲ್ಲಿ ಕಾಳಿ ಮಾತೆಯ ಮುಂದೆ ಪ್ರತಿದಿನ ಧೂಪವನ್ನು ಹಚ್ಚಿ. ಶುಕ್ರವಾರ ಕಾಳಿ ದೇವಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ.
ವಾರದಲ್ಲಿ ಒಂದು ದಿನ ಬೇವಿನ ಎಲೆ ರಸವನ್ನು ಮನೆಗೆ ಸಿಂಪಡಿಸಿ. ಇಲ್ಲವೆ ಧೂಪದ ರೀತಿಯಲ್ಲಿ ಅದನ್ನು ಬಳಸಿ. ಇದರಿಂದ ಕೀಟನಿಯಂತ್ರಣವಾಗುವ ಜೊತೆಗೆ ವಾಸ್ತು ದೋಷ ಕಡಿಮೆಯಾಗುತ್ತದೆ.