alex Certify ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ ಮಾಡುತ್ತಿರುವ ಸ್ಟೈಲಿಶ್ ಶ್ವಾನ ಇದಾಗಿದೆ.

ಇದರ ಹೆಸರು ವಿರೇನ್. ತನ್ನ ಸ್ನೇಹಿತ ಅಕ್ಷಯ್ ಜೊತೆ ತಾಜ್ ಮಹಲ್ ನೋಡಲು ಆಗ್ರಾಕ್ಕೆ ಬಂದಿದ್ದ ವಿರೇನ್​. ಅಕ್ಷಯ್ ಕೇರಳದವರಾಗಿದ್ದು ಮಲಯಾಳಿ ನಟ. ಅಕ್ಷಯ್‌ನ ಸ್ನೇಹಿತೆ ನೀರಜಾ ಕೂಡ ಜೊತೆಗಿದ್ದರು. ಈಕೆ ಉತ್ತರಾಖಂಡ್ ಮೂಲದವರು. ಮೂವರೂ ಲೇಹ್ ಲಡಾಖ್‌ಗೆ ಪ್ರವಾಸ ಮಾಡುತ್ತಿದ್ದು, ಇದರ ವಿಡಿಯೋ ವೈರಲ್ ಆಗಿದೆ.

ಆರಂಭದಲ್ಲಿ ಅಕ್ಷಯ್ ಮತ್ತು ಅವರ ಮುದ್ದಾದ ನಾಯಿ ವೀರೇನ್, ಲೇಹ್-ಲಡಾಖ್‌ಗೆ ಪ್ರವಾಸವನ್ನು ಕೈಗೊಂಡಿದ್ದರು. ಇಬ್ಬರೂ ಲೇಹ್ ಲಡಾಖ್‌ಗೆ ಪ್ರಯಾಣಿಸುವಾಗ ಅವರು ಹಾದುಹೋಗುವ ಎಲ್ಲಾ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ನಡುವೆ ದೆಹಲಿಯಲ್ಲಿ ಸ್ನೇಹಿತೆ ನೀರಜಾ ಸೇರಿಕೊಂಡಿದ್ದಾರೆ. ಮೂವರೂ ಆಗ್ರಾ ತಲುಪಿ ತಾಜ್ ಮಹಲ್‌ಗೆ ಭೇಟಿ ನೀಡಿದ್ದರು. ತಾಜ್‌ನ ಪಶ್ಚಿಮ ಗೇಟ್‌ನಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಓಡಿಸುತ್ತಿರುವ ನಾಯಿಯನ್ನು ಕಂಡು ಜನರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಸೆಲ್ಫೀ ತೆಗೆಸಿಕೊಳ್ಳಲು ಮುಗಿಬಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...