ಹುಬ್ಬಳ್ಳಿ: ಕೋವಿಡ್ ಪರಿಕರಗಳ ಬಿಲ್ ಪಾವತಿಗೆ ಪರ್ಸಂಟೇಜ್ ರೀತಿಯಲ್ಲಿ ಕಮಿಷನ್ ಕೇಳುತ್ತಿರುವ ಹಿನ್ನೆಲೆಯಲ್ಲಿ ಕಿರುಕುಳಕ್ಕೆ ಬೇಸತ್ತ ಹುಬ್ಬಳ್ಳಿಯ ಗುತ್ತಿಗೆದಾರರೊಬ್ಬರು ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ನಡೆದಿದೆ.
ಗುತ್ತಿಗೆದಾರ ಎ. ಬಸವರಾಜ್ ಎಂಬುವವರು ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್ ಪರಿಕರಗಳನ್ನು ಪೂರೈಸಿದ್ದರು. ಮೂಡಿಗೆರೆ ತಾಲೂಕಿಗೆ 27 ಲಕ್ಷ ಮೌಲ್ಯದ ಪರಿಕರ ಹಾಗೂ ಕಡೂರು ತಾಲೂಕಿಗೆ 85 ಲಕ್ಷ ಪರಿಕರಗಳನ್ನು ಪೂರೈಸಿದ್ದರು. ಕೋವಿಡ್ ಪರಿಕರ ಪೂರೈಸಿ 2 ವರ್ಷಗಳು ಆದರೂ ಇನ್ನೂ ಬಿಲ್ ಪಾವತಿ ಮಾಡಿಲ್ಲ ಎಂದು ತಿಳಿದುಬಂದಿದೆ.
ಮೂಡಿಗೆರೆ, ಕಡೂರು ತಾಲೂಕು ಪಂಚಾಯಿತಿ ಇಒಗಳು ಬಿಲ್ ಪಾವತಿ ಮಾಡುತ್ತಿಲ್ಲ. ಬಿಲ್ ಕೇಳಿದರೆ 40%ಗಿಂತ ಹೆಚ್ಚು ಕಮಿಷನ್ ನೀಡುವತೆ ಒತ್ತಾಯಿಸುತ್ತಿದ್ದಾರೆ. ಕಮಿಷನ್ ಕಿರುಕುಳಕ್ಕೆ ಬೇಸತ್ತು ದಯಾಮರಣ ನೀಡುವಂತೆ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದೇನೆ ಎಂದು ಬಸವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.