ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಯಾವುದೇ ಒಂದು ಕೃತ್ಯ ನಡೆದರೂ ತಮ್ಮ ಮೊಬೈಲ್ ನಲ್ಲಿ ಅದರ ಚಿತ್ರೀಕರಣ ಮಾಡುತ್ತಾರೆ. ಇದರಿಂದ ಒಂದು ರೀತಿಯಲ್ಲಿ ಅನುಕೂಲವೇ ಆಗುತ್ತದೆ. ಅಂತಹ ಘಟನೆಗಳು ಸಾಕ್ಷ್ಯ ಸಮೇತ ರೆಕಾರ್ಡ್ ಆಗಿರುತ್ತವೆ
ಈ ರೀತಿ ವ್ಯಕ್ತಿ ಒಬ್ಬರು ಠಾಣೆಯಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದ ವೇಳೆ ಪೊಲೀಸರು ಅವರ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಅದರ ವಿಚಾರಣೆ ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠದಲ್ಲಿ ನಡೆದು ಇದೀಗ ತೀರ್ಪು ಹೊರ ಬಿದ್ದಿದ್ದು, ಠಾಣೆಯಲ್ಲಿ ವಿಡಿಯೋ ರೆಕಾರ್ಡ್ ಮಾಡುವುದು ಅಪರಾಧವಲ್ಲ ಎಂದು ಹೇಳಿದೆ.
ಪೊಲೀಸ್ ಠಾಣೆಯನ್ನು ನಿಷೇಧಿತ ಸ್ಥಳ ಎಂದು ಗುರುತಿಸಲಾಗಿಲ್ಲ. ಹೀಗಾಗಿ ಅಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವುದು ಅಪರಾಧವಲ್ಲ ಎಂದು ತಿಳಿಸಿ ರವೀಂದ್ರ ಉಪಾಧ್ಯಾಯ ಎಂಬವರ ವಿರುದ್ಧ ದಾಖಲಾಗಿದ್ದ ದೂರನ್ನು ರದ್ದುಗೊಳಿಸಿದೆ.