ಬಾಲಿವುಡ್ನ ಫೇಮಸ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಅಪ್ಪ-ಅಮ್ಮನಾಗಿ ಭಡ್ತಿ ಪಡೆಯಲಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಆಲಿಯಾಳ ಬೇಬಿ ಶವರ್ ಸಮಾರಂಭವೂ ನಡೆದಿದೆ. ಬಾಲಿವುಡ್ನಲ್ಲಿ ನಡೆದ ಸಾಲು ಸಾಲು ದೀಪಾವಳಿ ಪಾರ್ಟಿಗಳಲ್ಲಿ ತುಂಬು ಗರ್ಭಿಣಿ ಆಲಿಯಾ ಭಟ್ ಕಾಣಿಸಿಕೊಂಡಿಲ್ಲ.
ಯಾಕಂದ್ರೆ ಆಲಿಯಾ ಡೆಲಿವರಿ ಡೇಟ್ ಕೂಡ ಹತ್ತಿರ ಬರ್ತಿದೆ. ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಆಲಿಯಾಗೆ ಹೆರಿಗೆ ಆಗಲಿದೆಯಂತೆ. ನವೆಂಬರ್ 28ರಂದೇ ಹೆರಿಗೆ ದಿನಾಂಕವನ್ನು ಆಲಿಯಾ ಮತ್ತು ರಣಬೀರ್ ಫಿಕ್ಸ್ ಮಾಡಿಕೊಂಡಿದ್ದಾರಂತೆ. ಕಾರಣ ಅದೇ ವಾರದಲ್ಲಿ ಆಲಿಯಾ ಸಹೋದರಿ ಶಹೀನ್ ಭಟ್ಳ ಹುಟ್ಟುಹಬ್ಬವೂ ಬರುತ್ತದೆ. ಹಾಗಾಗಿ ನವೆಂಬರ್ 28ರಂದೇ ಮಗು ಜನಿಸಬೇಕು ಅನ್ನೋದು ಆಲಿಯಾ ಆಸೆ.
ನವೆಂಬರ್ 28ರಂದೇ ಶಹೀನ್ ಜನ್ಮದಿನ. ಡೆಲಿವರಿಗಾಗಿ ಆಲಿಯಾ, ಎಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ರಣಬೀರ್ ತಂದೆ, ನಟ ರಿಷಿ ಕಪೂರ್ ಇದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆಲಿಯಾ ಗರ್ಭಾವಸ್ಥೆಯಲ್ಲೂ ನಿರಂತರವಾಗಿ ಕೆಲಸ ಮಾಡಿದ್ದಾರೆ. ‘ಡಾರ್ಲಿಂಗ್ಸ್’ ಹಾಗೂ ‘ಬ್ರಹ್ಮಾಸ್ತ್ರ’ ಚಿತ್ರದ ಪ್ರಮೋಷನ್ನಲ್ಲಿ ತೊಡಗಿಸಿಕೊಂಡಿದ್ದರು. ಸಾಕಷ್ಟು ಆಕ್ಟಿವ್ ಆಗಿಯೇ ಇದ್ದ ಆಲಿಯಾ, ಶೀಘ್ರವೇ ಅಮ್ಮನಾಗುವ ಖುಷಿಯಲ್ಲಿದ್ದಾರೆ.