ಆಗ್ರಾ: ರಸಗುಲ್ಲಾ ತಿನ್ನುವ ವಿಚಾರದಲ್ಲಿ ವಿವಾದ ಉಂಟಾಗಿ ಓರ್ವ ಮೃತಪಟ್ಟಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಮದುವೆಯ ಆರತಕ್ಷತೆ ಸಮಾರಂಭದಲ್ಲಿ ರಸಗುಲ್ಲಾ ವಿಚಾರವಾಗಿ ನಡೆದ ಮಾರಾಮಾರಿ 20 ವರ್ಷದ ಯುವಕನೊಬ್ಬನ ಸಾವಿಗೆ ಕಾರಣವಾಗಿದೆ. ಘಟನೆಯಲ್ಲಿ ಆರತಕ್ಷತೆಗೆ ಬಂದಿದ್ದ ಹಲವರು ಗಾಯಗೊಂಡಿದ್ದಾರೆ.
ರಸಗುಲ್ಲಾ ಬಡಿಸದಿರುವ ಬಗ್ಗೆ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ. ವಧುವಿನ ಕಡೆಯ ಸದಸ್ಯರೊಬ್ಬರು, ಜನರು ಊಟ ಮಾಡಿ ಖುಷಿ ಪಡುತ್ತಿದ್ದಾಗ ಇದ್ದಕ್ಕಿದ್ದಂತೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದೇ ಈ ದುರ್ಘಟನೆಗೆ ಕಾರಣವಾಗಿದೆ. ವಧು ಮತ್ತು ವರನ ಕಡೆಯವರು ತಟ್ಟೆಗಳು ಮತ್ತು ಕುರ್ಚಿಗಳನ್ನು ಪರಸ್ಪರ ಎಸೆದುಕೊಂಡು ಮಾರಾಮಾರಿ ನಡೆಸಿದ್ದು, ಇದರ ವಿಡಿಯೋ ವೈರಲ್ ಆಗಿದೆ. ದಾಳಿ ಮಾಡಲು ಚಮಚಗಳು ಮತ್ತು ಚೂಪಾದ ವಸ್ತುಗಳನ್ನು ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಗುಂಪಿನ ನಡುವೆ ಘರ್ಷಣೆಯಾಗಿ ಮೊದಲು 22 ವರ್ಷದ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಅವನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು. ಜಗಳದಲ್ಲಿ ಭಾಗಿಯಾಗಿರುವ ಹಲವಾರು ವ್ಯಕ್ತಿಗಳನ್ನು ಬಂಧಿಸಲಾಗಿದೆ.