ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2008ರಲ್ಲಿ ತೆರೆಕಂಡ ‘ಮನಸುಗಳ ಮಾತು ಮಧುರ’ ಚಿತ್ರದ ಮೂಲಕ ತಮ್ಮ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಹರಿಪ್ರಿಯಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಾಗೂ ಮಲೆಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ನಟಿ ಹರಿಪ್ರಿಯಾ ಇತ್ತೀಚೆಗೆ ಅಭಿನಯಿಸಿರುವ ಸಾಕಷ್ಟು ಸಿನಿಮಾಗಳು ಈಗಾಗಲೇ ತೆರೆ ಮೇಲೆ ಬರಲು ಸಜ್ಜಾಗಿವೆ. ‘ತಾಯಿ ಕಸ್ತೂರ್ ಬಾ ಗಾಂಧಿ’ ‘ಹ್ಯಾಪಿ ಎಂಡಿಂಗ್’ ಹಾಗೂ ‘ಲಗಾಮ್’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿರುವ ಹರಿಪ್ರಿಯಾ ‘ಬೆಲ್ ಬಾಟಮ್ 2’ ಹಾಗೂ ‘ಯದಾ ಯದಾಹಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ಹರಿಪ್ರಿಯಾ ಅವರಿಗೆ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ