alex Certify ಒಮ್ಮೆ ನೋಡಲೇಬೇಕು ʼಪಾಲಕ್ಕಾಡ್ʼ ಪರ್ವತ ಶ್ರೇಣಿಯ ಅಂದ.…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮ್ಮೆ ನೋಡಲೇಬೇಕು ʼಪಾಲಕ್ಕಾಡ್ʼ ಪರ್ವತ ಶ್ರೇಣಿಯ ಅಂದ.…!

ಪಾಲಕ್ಕಾಡ್ ಜಿಲ್ಲೆಯ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇಲ್ಲಿನ ನೆನ್ಮರದ ಪಟ್ಟಣದಿಂದ ಮೋಡಗಳು ಮುತ್ತಿಕ್ಕುವಂತೆ ಕಾಣುವ ನೆಲ್ಲಿಯಪಥಿ ಪರ್ವತ ಶ್ರೇಣಿಗಳು ಆರಂಭವಾಗುತ್ತವೆ. ಇದು ನಯನ ಮನೋಹರವಾಗಿದೆ.

ಪರ್ವತಾರೋಹಿಗಳಿಗೆ ಮತ್ತು ಟ್ರೆಕ್ಕಿಂಗ್ ಪ್ರಿಯರಿಗೆ ಬಲು ಇಷ್ಟವಾದ ತಾಣ. ಇಲ್ಲಿನ ಕಾಡುಗಳ ದಟ್ಟಣೆ ಮತ್ತು ಪರ್ವತಗಳ ಅಂದವನ್ನು ಸವಿಯಲೆಂದೇ ಪ್ರವಾಸಿಗರು ಆಗಮಿಸುತ್ತಾರೆ.

ಪೋಥುಂಡಿ ಅಣೆಕಟ್ಟೆಯಲ್ಲಿ ಬೋಟಿಂಗ್‌ ಸೌಲಭ್ಯವಿದೆ. ಇದು ಪಿಕ್‌ ನಿಕ್‌ ಗೆ ಹೋಗಲು ಉತ್ತಮವಾದ ಆಯ್ಕೆಯಾಗಿದೆ. ಘಟ್ಟದ ರಸ್ತೆಯು ಮೇಲ್ಮುಖವಾಗಿ ಸುತ್ತಿಕೊಂಡು ನೆಲ್ಲಿಯಂಪಥಿಗೆ ಹೋಗುವ ಹಚ್ಚ ಹಸುರಿನ ಸೌಂದರ್ಯದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಈ ಎಸ್ಟೇಟ್‌ನಲ್ಲಿ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಕಟ್ಟಲಾಗಿರುವ ಸುಂದರವಾದ ಒಂದು ಬಂಗಲೆ ಇದೆ ಮತ್ತು ಅದನ್ನು ಈಗ ಖಾಸಗಿ ಒಡೆತನದ ರೆಸಾರ್ಟ್ ಆಗಿ ಪರಿವರ್ತಿಸಲಾಗಿದೆ. ಕೈಕಟ್ಟಿಯಲ್ಲಿ ಸಮುದಾಯ ಭವನ ಲಭ್ಯವಿದೆ, ಇದನ್ನು ಸಾಮಾನ್ಯವಾಗಿ ಟ್ರಕ್ಕಿಂಗ್‌ನಲ್ಲಿ ಆಸಕ್ತಿ ಇರುವವರು ಉಪಯೋಗಿಸಿಕೊಳ್ಳುತ್ತಾರೆ.

ಪಲಾಗಪಂಡಿಯಿಂದ ಸ್ವಲ್ಪವೇ ದೂರದಲ್ಲಿ ಸೀತಾರ್ಕುಂಡು ಎಂಬ ಪ್ರದೇಶವಿದ್ದು, ಇಲ್ಲಿಂದ ಕಣಿವೆಯ ಸುಂದರವಾದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಪಾಲಕ್ಕಾಡ್ ಸಮೀಪದ ರೈಲ್ವೇ ನಿಲ್ದಾಣದಿಂದ ಸುಮಾರು 56 ಕಿ.ಮೀ. ದೂರದಲ್ಲಿದೆ. ಸಮೀಪದ ಏರ್‌ಪೋರ್ಟ್ ಎಂದರೆ ಕೊಯಮತ್ತೂರು ಅಂತರಾಷ್ಟ್ರೀಯ ಏರ್‌ಪೋರ್ಟ್. ಇದು ಪಾಲಕ್ಕಾಡ್‌ನಿಂದ 55 ಕಿ.ಮೀ. ದೂರದಲ್ಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...