ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಒಬ್ಬರು ಗಣಿತವನ್ನು ಇಷ್ಟಪಡುತ್ತಾರೆ ಮತ್ತು ಇನ್ನೊಬ್ಬರು ಅದರ ಹೆಸರು ಕೇಳಿದರೆ ಮಾರುದ್ದ ದೂರ ಸರಿಯುತ್ತಾರೆ. ಸರಿ, ನೀವು ಗಣಿತ ಪ್ರಿಯರಲ್ಲದಿದ್ದರೂ ಸಹ ನಿಮ್ಮನ್ನು ಜೋರಾಗಿ ನಗಿಸುವ ವಿಡಿಯೋ ಒಂದು ವೈರಲ್ ಆಗಿದೆ.
ಬಾಲಕನೊಬ್ಬ ತನ್ನ ತಂಗಿಗೆ ಗಣಿತ ಕಲಿಸುವಾಗ ಹತಾಶೆಯಿಂದ ಅಳುತ್ತಿರುವ ವಿಡಿಯೋ ಇದಾಗಿದೆ. ಈ ಘಟನೆಯು ಚೀನಾದಲ್ಲಿ ನಡೆದಿದ್ದು, ಗಣಿತ ಎಂದರೆ ದೇಶ ಯಾವುದೇ ಇರಲಿ, ಎಲ್ಲಾ ಕಡೆಯೂ ಒಂದೇ ಎಂದು ವಿಡಿಯೋ ತೋರಿಸುತ್ತದೆ.
ಚೀನೀ ಹುಡುಗನೊಬ್ಬ ತನ್ನ ತಂಗಿಗೆ ಗಣಿತವನ್ನು ಕಲಿಸುತ್ತಿದ್ದಾನೆ. ಆದರೆ ಆಕೆಗೆ ಅದು ಅರ್ಥವೇ ಆಗುತ್ತಿಲ್ಲ. ತನ್ನ ತಂಗಿಗೆ ಹೇಗೆ ಹೇಳಿಕೊಡುವುದು ಎಂದು ತಿಳಿಯದೇ ಬಾಲಕ ಅಳುತ್ತಿರುವ ವಿಡಿಯೋ ಇದಾಗಿದೆ.
“ನಾನು ಅವಳಿಗೆ ಈಗಾಗಲೇ ಉತ್ತರವನ್ನು ನೀಡಿದ್ದೇನೆ, ಚಿತ್ರದಲ್ಲಿ ಮೂರು ಲಂಬ ಕೋನಗಳಿವೆ, ಎರಡು ಇವೆ ಎಂದು ಅವಳು ಹೇಳುತ್ತಿದ್ದಾಳೆ, ಎಷ್ಟು ಹೇಳಿಕೊಟ್ಟರೂ ಅರ್ಥ ಆಗ್ತಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾ ಬಾಲಕ ಅಳುತ್ತಿದ್ದರೆ, ಇದನ್ನು ನೋಡಿದವರು ಬಿದ್ದೂ ಬಿದ್ದೂ ನಗುವಂತೆ ಮಾಡಿದೆ.
https://youtu.be/WwmsbA_FuTk