ಕಲಾ ಪ್ರಕಾರಗಳು ಶಾಂತಿಯ ಮೂಲ. ಕಲೆಗೆ ಶಾಂತತೆ ಮತ್ತು ವಿಶ್ರಾಂತಿಯನ್ನು ಅನುಭವಿಸುವಂತೆ ಮಾಡುವ ಶಕ್ತಿ ಇದೆ. ಅದೇ ರೀತಿ ನೃತ್ಯ ಮತ್ತು ಸಂಗೀತವು ಹೆಚ್ಚು ಜನಪ್ರಿಯವಾಗಿರುವ ಯಾವುದೇ ರೀತಿಯ ಕಲೆಯ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ.
ಈ 128 ಪ್ರದರ್ಶಕರು ತಮ್ಮ “ಹ್ಯಾಂಡ್ ಬ್ಯಾಲೆ” ನೊಂದಿಗೆ ಜಾಲತಾಣದಲ್ಲಿ ನೆಟ್ಟಿಗರ ಹೃದಯವನ್ನು ಗೆದ್ದಿದ್ದಾರೆ. 2020 ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಮುಕ್ತಾಯದ ಹಸ್ತಾಂತರ ಸಮಾರಂಭದಲ್ಲಿ ಪ್ರದರ್ಶಿಸಲಾದ ಕ್ಲಿಪ್ ಈಗ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ.
ವೀಡಿಯೊ ಈಗಾಗಲೇ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, ಫ್ರೆಂಚ್ ನೃತ್ಯ ಸಂಯೋಜಕ ಸಾಡೆಕ್ ವಾಫ್ ನೃತ್ಯವನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. ಅವರ ಹಿಂದೆ 128 ಮಂದಿ ಮೋಡಿಮಾಡುವ ಮತ್ತು ಸಿಂಕ್ರೊನೈಸ್ ಮಾಡಿದ ಕೈ ಚಲನೆಗಳನ್ನು ರಚಿಸುತ್ತಾರೆ.
ಸಾಮಾಜಿಕ ಜಾಲತಾಣ ಬಳಕೆದಾರರು ಅದ್ಭುತವಾದ ನೃತ್ಯಕ್ಕೆ ಬೆರಗಾಗಿದ್ದಾರೆ. ಕಲೆಯು ತನ್ನೊಂದಿಗೆ ತೊಡಗಿಸಿಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ಮುಕ್ತವಾಗಿದೆ ಎಂದು ಅದು ತೋರಿಸಿದೆ.
ಇಡೀ ಜಗತ್ತೇ ನೋಡಬೇಕಾದದ್ದು, ಆದರೆ ಪ್ಯಾರಾಲಿಂಪಿಕ್ಸ್‌ಗೆ ಒಲಿಂಪಿಕ್ಸ್‌ನಷ್ಟು ಕವರೇಜ್ ಇಲ್ಲ ಎಂದು ಕೆಲವರು ನಿರಾಶೆ ವ್ಯಕ್ತಪಡಿಸಿದ್ದಾರೆ.