ಬಿಜೆಪಿ ಕುರಿತು ವ್ಯಂಗ್ಯವಾಡಿರುವ ರಾಜ್ಯ ಕಾಂಗ್ರೆಸ್, “ಕಾಂಗ್ರೆಸ್ ಕಿಟಿಕಿ ಇಣುಕುವುದರಲ್ಲೇ ನಿರತರಾಗಿದ್ದ ಬಿಜೆಪಿಗೆ ತಮ್ಮಲ್ಲಿನ ಬಿಜೆಪಿ ವರ್ಸಸ್ ಬಿಜೆಪಿ ಕದನದಲ್ಲಿ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ, ಅವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಬಿಜೆಪಿಗೇ ತಿಳಿಯುತ್ತಿಲ್ಲ! ಯತ್ನಳರ ಹಾವು ಯಾವುದು ? ಭ್ರಷ್ಟಾಚಾರದ ಹಾವೇ ? ಸಿಡಿ ಹಾವೇ ? ಕರ್ನಾಟಕ ಬಿಜೆಪಿ” ಎಂದು ಪ್ರಶ್ನಿಸಿದೆ.
“ಶಿಸ್ತಿನ ಪಕ್ಷ ಎಂದುಕೊಳ್ಳುವ ಬಿಜೆಪಿ ಕನಿಷ್ಠ ಪಕ್ಷ ಒಬ್ಬ ಯತ್ನಾಳರಿಗೆ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದಾದರೆ ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು ಎಂಬುದು ಸ್ಪಷ್ಟ ! ಯಡಿಯೂರಪ್ಪ ವಿರುದ್ಧ ಯತ್ನಾಳ್ ಆಡುವ ಮಾತುಗಳು ಸಂತೋಷ್ ಅವರದ್ದು, ಬಾಯಿ ಮಾತ್ರ ಯತ್ನಾಳ್ರದ್ದು !” ಎಂದು ವ್ಯಂಗ್ಯವಾಡಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಯತ್ನಾಳ್, ಪಕ್ಷದಲ್ಲಿನ ತಮ್ಮ ವಿರೋಧಿಗಳಿಗೆ, ನಿಮ್ಮ ಬಳಿ ಬಟ್ಟೆ ಹಾವಿದ್ದರೆ ನನ್ನ ಬಳಿ ನಿಜವಾದ ಹಾವಿದೆ ಎಂದಿದ್ದರು. ಈ ಪತ್ರಿಕಾ ವರದಿಯನ್ನಿಟ್ಟುಕೊಂಡು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ.