![](https://kannadadunia.com/wp-content/uploads/2022/10/whatsapp_001-sixteen_nine.jpg)
ಸುಮಾರು 2 ಗಂಟೆ ನಂತರ ವಾಟ್ಸಾಪ್ ಸೇವೆ ಪುನಾರಂಭವಾಗಿದೆ. ತಾಂತ್ರಿಕ ಸಮಸ್ಯೆಯಿಂದ ಸರ್ವರ್ ಡೌನ್ ಆಗಿ ಸುಮಾರು 2 ಗಂಟೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಎರಡು ಗಂಟೆ ನಂತರ ಕೆಲವೊಂದು ಪ್ರದೇಶಗಳಲ್ಲಿ ವಾಟ್ಸಾಪ್ ಸೇವೆ ಮರು ಸ್ಥಾಪನೆಯಾಗಿದೆ. ಶೀಘ್ರವೇ ಎಲ್ಲಾ ಕಡೆ ಸರಿಹೋಗಲಿದೆ. ತಾಂತ್ರಿಕ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ವಾಟ್ಸಾಪ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಸುಮಾರು 2 ಗಂಟೆಯ ನಂತರ ವಾಟ್ಸಾಪ್ ಸೇವೆ ಪೂನಾರಂಭಗೊಂಡಿದೆ.
ಮಧ್ಯಾಹ್ನ 12. 40 ರ ನಂತರ ದೇಶಾದ್ಯಂತ ಬಳಕೆದಾರರ ವಾಟ್ಸಾಪ್ ಸರ್ವರ್ ಡೌನ್ ಆಗಿದ್ದು, ಮೆಸೇಜ್ ಕಳಿಸಲು ಸಾಧ್ಯವಾಗದೇ ಬಳಕೆದಾರರು ಪರದಾಡಿದ್ದರು. 200 ಮಿಲಿಯನ್ ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರೊಂದಿಗೆ WhatsApp ವಿಶ್ವದ ಅತಿದೊಡ್ಡ ಚಾಟ್ ವೇದಿಕೆಯಾಗಿದೆ. ತಾಂತ್ರಿಕ ತೊಂದರೆಯಿಂದ ಸರ್ವರ್ ಡೌನ್ ಆಗಿ ಸಮಸ್ಯೆಯಾಗಿದ್ದು, ಸರಿಪಡಿಸುವುದಾಗಿ ಮೆಟಾ ತಿಳಿಸಿತ್ತು. ಎರಡು ಗಂಟೆ ನಂತರ ಸೇವೆ ಪುನಾರಂಭವಾಗಿದೆ. WhatsApp ಸೇವೆಗಳ ಭಾಗಶಃ ಮರುಸ್ಥಾಪನೆಯು ಭಾರತದ ಕೆಲವು ನಗರಗಳಲ್ಲಿ ಪ್ರಾರಂಭವಾಗಿದೆ.