ಪಾರ್ಸೆಲ್ ಟ್ರಕ್ ಹಾದುಹೋಗುವುದನ್ನು ನೋಡಿದ ತಕ್ಷಣ ನಾಲ್ಕು ಮೇಕೆಗಳ ಗುಂಪು ಮೂರ್ಛೆ ಹೋದಂತೆ ನಟಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಗೆ ನಗೆ ತರಿಸಿದೆ.
ವೈರಲ್ ವೀಡಿಯೊ ಕ್ಲಿಪ್ ನಲ್ಲಿ ರಸ್ತೆಬದಿಯ ಹಸಿರು ಪ್ರದೇಶದಲ್ಲಿ ಮೇಕೆಗಳು ಮೇಯುತ್ತಿರುವುದನ್ನು ಕಾಣಬಹುದು. ಅಲ್ಲೇ ಪಕ್ಕದ ರಸ್ತೆಯಲ್ಲಿ ಟ್ರಕ್ ಬಂದು ಅವುಗಳ ಪಕ್ಕ ಹಾದುಹೋಗುತ್ತದೆ. ಟ್ರಕ್ ನೋಡಿದ ತಕ್ಷಣ ಅವೆಲ್ಲವೂ ತಾವಿದ್ದ ಸ್ಥಳದಲ್ಲಿ ಬಿದ್ದು ಮೂರ್ಛೆ ಹೋದಂತೆ ನಟಿಸುತ್ತವೆ.
ಟ್ರಕ್ ಹಾದು ಹೋದರೆ ಮೇಕೆಗಳು ಏಕೆ ಬೀಳಬೇಕು ಎಂಬ ಕಾರಣಕ್ಕೆ ನೆಟ್ಟಿಗರಲ್ಲಿ ನಗೆ ತರಿಸಿದ್ದು, ವಿವಿಧ ರೀತಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.