ಚಿತ್ರದುರ್ಗ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಚಳ್ಳಕೆರೆ ಠಾಣೆ ಸಿಪಿಐ ಬಿ.ಜಿ.ಉಮೇಶ್ ರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಸಿಪಿಐ ಉಮೇಶ್ ಎರಡು ವಿವಾಹವಾಗಿದ್ದಲ್ಲದೇ ತನ್ನ ಸಂಬಂಧಿಯೇ ಆಗಿರುವ ಯುವತಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದ. ಅಲ್ಲದೇ 5 ಬಾರಿ ಯುವತಿಗೆ ಗರ್ಭಪಾತ ಮಾಡಿಸಲಾಗಿದೆ ಎಂದು ಸಂತ್ರಸ್ತ ಯುವತಿ ದೂರು ದಾಖಲಿಸಿದ್ದಳು.
ಯುವತಿ ದೂರು ಹಿನ್ನೆಲೆಯಲ್ಲಿ ಸಿಪಿಐ ಉಮೇಶ್ ವಿರುದ್ಧ ಸೆಕ್ಷನ್ 376 (2)(k)(n), 323, 504, 506 ಅಡಿ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಸಿಪಿಐ ಎಸ್ಕೇಪ್ ಆಗಿದ್ದು, ಇದೀಗ ಸಿಪಿಐ ಉಮೇಶ್ ರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.