ಅದ್ಧೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ದೀಪಾವಳಿ ಒಂದು. ಈ ದಿನವನ್ನು ಮನೆಯ ಮೂಲೆ ಮೂಲೆಗಳಲ್ಲಿ ದಿಪ ಬೆಳಗಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀ ರಾಮನು, ರಾವಣನನ್ನು ಕೊಂದು ಅಯೋಧ್ಯೆಗೆ ತನ್ನ 14 ವರ್ಷಗಳ ವನವಾಸವನ್ನು ಮುಗಿಸಿ ಮರಳಿದ ದಿನವಿದು.
ದೀಪಾವಳಿಯಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸುವ ಪದ್ಧತಿಯಿದೆ. ಗಣೇಶ ಮತ್ತು ಲಕ್ಷ್ಮಿ ದೇವಿಯ ಆರಾಧನೆ ಮನೆ ಮನೆಯಲ್ಲಿ ನಡೆಯುತ್ತದೆ. ಮುಂಬರುವ ವರ್ಷವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ ಎಂದು ಪ್ರಾರ್ಥಿಸಿ ಭಕ್ತರು ಪೂಜೆ, ಆರಾಧನೆ ಮಾಡ್ತಾರೆ.
ದೀಪಾವಳಿ ರಾತ್ರಿ ಹಲ್ಲಿ ನಿಮ್ಮ ಕಣ್ಣಿಗೆ ಬಿದ್ರೆ ಶುಭವೆಂದು ಪರಿಗಣಿಸಲಾಗಿದೆ. ಇದು ಅದೃಷ್ಟದ ಸಂಕೇತವೆನ್ನಲಾಗುತ್ತದೆ.
ಗೂಬೆ ಲಕ್ಷ್ಮಿಯ ವಾಹವೆಂದು ನಂಬಲಾಗಿದೆ. ದೀಪಾವಳಿ ದಿನ ಗೂಬೆ ಕಣ್ಣಿಗೆ ಬಿದ್ರೆ ನಿಮ್ಮ ಅದೃಷ್ಟ ಬದಲಾದಂತೆ. ಮುಂದಿನ ದಿನಗಳು ಮಂಗಳಕರವಾಗಿರಲಿದೆ ಎಂಬುದರ ಸಂಕೇತವಿದು.
ಬೆಕ್ಕು ಮನೆ ಪ್ರವೇಶ ಮಾಡುವುದು ಒಳ್ಳೆಯದಲ್ಲ. ಆದ್ರೆ ದೀಪಾವಳಿ ರಾತ್ರಿ ಬೆಕ್ಕು ಮನೆಗೆ ಬಂದ್ರೆ ಶುಭವೆನ್ನಲಾಗುತ್ತದೆ. ಬೆಕ್ಕು ಮನೆಗೆ ಬಂದ್ರೆ ಮನೆಯಲ್ಲಿ ಧನಾಗಮನವಾಗುತ್ತದೆ ಎಂದು ನಂಬಲಾಗಿದೆ.
ದೀಪಾವಳಿಯಂದು ರಸ್ತೆಯಲ್ಲಿ ಬಿದ್ದ ಹಣ ಸಿಕ್ಕರೆ ಅದು ಶುಭಕರ. ದಾರಿಯಲ್ಲಿ ಸಿಕ್ಕ ಹಣವನ್ನು ಧೈರ್ಯವಾಗಿ ಮನೆಗೆ ತೆಗೆದುಕೊಂಡು ಬಂದು ಅದನ್ನು ಕಪಾಟಿನಲ್ಲಿಡಿ. ಇದು ನಿಮ್ಮ ಆರ್ಥಿಕ ಸಂಕಷ್ಟವನ್ನು ದೂರ ಮಾಡುತ್ತದೆ.
ದೀಪಾವಳಿ ದಿನ ಮಂಗಳಮುಖಿಯರು ಮನೆಗೆ ಬಂದ್ರೆ ಬರಿಗೈನಲ್ಲಿ ಕಳುಹಿಸಬೇಡಿ. ಮನೆಗೆ ಬಂದ ಮಂಗಳಮುಖಿಯರು ನಿಮಗೆ ಹಣ ನೀಡಿದ್ರೆ ಅದನ್ನು ಶುಭವೆಂದು ಪರಿಗಣಿಸಲಾಗಿದೆ.