ಬೆಳಕಿನ ಹಬ್ಬ ದೀಪಾವಳಿ ಇಂದಿನಿಂದ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಪಟಾಕಿ ಸಿಡಿಸಲು ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ ಪಟಾಕಿ ಸಿಡಿಸುವ ಮುನ್ನ ಕೆಲವೊಂದು ಮಾಹಿತಿಗಳನ್ನು ತಿಳಿದಿರುವುದು ಒಳ್ಳೆಯದು.
ಐದು ವರ್ಷದೊಳಗಿನ ಮಕ್ಕಳನ್ನು ಪಟಾಕಿ ಹಚ್ಚುವಾಗ ಹತ್ತಿರ ಬಿಡಬೇಡಿ.
ಮಕ್ಕಳು ಸ್ವತಃ ಪಟಾಕಿಗಳನ್ನು ಹೊತ್ತಿಸಲು ಬಿಡಬೇಡಿ.
ಸಿಡಿಯದೇ ಇರುವ ಪಟಾಕಿಗಳನ್ನು ಮತ್ತೆ ಹೊತ್ತಿಸಲು ಪ್ರಯತ್ನ ಮಾಡಬೇಡಿ.
ಮನೆಯೊಳಗೆ ಅಥವಾ ಪಾರ್ಕಿಂಗ್ ನಲ್ಲಿ ಪಟಾಕಿಗಳನ್ನು ಹಚ್ಚಬೇಡಿ.
ಪಟಾಕಿಗಳನ್ನು ಕೈಯಲ್ಲಿ ಹಿಡಿದು ಹಚ್ಚಬೇಡಿ.
ಸಿಂಥೆಟಿಕ್ ಹಾಗೂ ಸಡಿಲವಾದ ಬಟ್ಟೆಗಳನ್ನು ಧರಿಸಬೇಡಿ.
ಪ್ರಥಮ ಚಿಕಿತ್ಸಾ ಕಿಟ್ ಅನ್ನು ಮನೆಯಲ್ಲಿ ಇಟ್ಟುಕೊಳ್ಳಿ.
ಪಟಾಕಿಗಳನ್ನು ಹಚ್ಚಲು ಹತ್ತಿರ ಬಗ್ಗುವ ಬದಲು ಉದ್ದವಾದ ಕೋಲನ್ನು ಇದಕ್ಕಾಗಿ ಬಳಸಿ.
ಪಟಾಕಿ ಹೊಡೆಯುವಾಗ ಮಕ್ಕಳ ಬಗ್ಗೆ ಗಮನವಿರಲಿ.
ಪಟಾಕಿ ಹಚ್ಚಲು ವಿಶಾಲ ಪ್ರದೇಶಕ್ಕೆ ಹೋಗಿ.
ಬಳಸಿದ ಪಟಾಕಿಗಳನ್ನು ವಿಲೇವಾರಿ ಮಾಡುವ ಮೊದಲು ಬಕೆಟ್ ನೀರಿನಲ್ಲಿ ಮುಳುಗಿಸಿ.
ಪಟಾಕಿ ಹಚ್ಚುವಾಗ ಮುಖ, ಕಣ್ಣು ಕೂದಲಿಗೆ ಬೆಂಕಿಯ ಕಿಡಿ ತಗುಲದಂತೆ ಎಚ್ಚರ ವಹಿಸಿ.