ನವದೆಹಲಿ: ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಲಿದ್ದಾರೆ. ಉತ್ತರಾಖಂಡ್ ರಾಜ್ಯದ ಮಾನಾ ಗ್ರಾಮದಲ್ಲಿ ದೀಪಾವಳಿ ಆಚರಿಸುವರು.
ಭಾರತ ಮತ್ತು ಟಿಬೇಟ್ ಗಡಿ ಪ್ರದೇಶದಲ್ಲಿರುವ ಮಾನಾ ಗ್ರಾಮದಲ್ಲಿ ಯೋಧರು ಮತ್ತು ಐಟಿಬಿಪಿ ತಂಡದೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಿಸಲಿದ್ದಾರೆ. 2014 ರಿಂದಲೂ ಯೋಧರ ಜೊತೆಗೆ ಮೋದಿ ದೀಪಾವಳಿ ಹಬ್ಬ ಆಚರಿಸುತ್ತಾರೆ. ಕಳೆದ ವರ್ಷ ಕಾಶ್ಮೀರದ ನೌಶೇರಾದಲ್ಲಿ ದೀಪಾವಳಿ ಆಚರಿಸಿದ್ದರು.