ಕಾನ್ಪುರ- ಸಿನೀಮಿಯ ರೀತಿ ಇಲ್ಲೊಬ್ಬ ವಧು ಮದುವೆಯಾದ ಮರು ದಿನವೇ ಗಂಡನ ಮನೆಯಿಂದ ಚಿನ್ನಾಭರಣ ಸಮೇತ ಕಾಲ್ಕಿತ್ತ ಘಟನೆ ಕಾನ್ಪುರ ಜಿಲ್ಲೆಯ ಜಡೇಪುರ ಗ್ರಾಮದಲ್ಲಿ ನಡೆದಿದೆ. ರುಚಿ ಎಂಬ ಹುಡುಗಿ ಪರಾರಿಯಾದ ಹುಡುಗಿ. ಇನ್ನು ಈಕೆ ಚಿನ್ನಾಭರಣ, ನಗದು ಅಷ್ಟೆ ಅಲ್ಲದೆ ಗಂಡನ ಮನೆಯ ಒಂದಷ್ಟು ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ.
ಜಡೇಪುರ ಗ್ರಾಮದ ನಿವಾಸಿಯಾದ ಅರವಿಂದ್ ಎಂಬುವವರು ರುಚಿ ಎಂಬ ಹೆಸರಿನ ಹುಡುಗಿಯನ್ನು ಮದುವೆಯಾಗಿದ್ದರು. ಮದುವೆಗೂ ಮೊದಲು ತಕ್ತಾಲಿ ಗ್ರಾಮದ ಇಬ್ಬರು ಈತನಿಗೆ ಮದುವೆ ನಿಗದಿ ಮಾಡಲು 70 ಸಾವಿರ ಹಣದ ಬೇಡಿಕೆ ಇಟ್ಟಿದ್ದರಂತೆ. ಮದುವೆ ನಿಗದಿಯಾದ ಬಳಿಕ ಅಕ್ಟೋಬರ್ 1 ರಂದು ಬಿಹಾರದ ಗಯಾಕ್ಕೆ ಕರೆದೊಯ್ದ ರುಚಿ ಎಂಬ ಹುಡುಗಿಯೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆಯ ನಂತರ ಈತ ತನ್ನ ಪತ್ನಿಯೊಂದಿಗೆ ಕಾನ್ಪುರ ಜಡೇಪುರ ಗ್ರಾಮಕ್ಕೆ ಬಂದಿದ್ದಾನೆ.
ಅಕ್ಟೋಬರ್ 4 ರಂದು ವಧು ಈತನ ಮನೆಯಲ್ಲಿದ್ದ 30 ಸಾವಿರ ನಗದಿನ ಜೊತೆ ಆಕೆಗೆ ಮದುವೆಯಲ್ಲಿ ನೀಡಲಾಗಿದ್ದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ. ಜೊತೆಗೆ ನನ್ನನ್ನು ಸಂಪರ್ಕ ಮಾಡದಂತೆ ಕರೆ ಮಾಡಿ ಗಂಡನಿಗೆ ಹೇಳಿದ್ದಾಳಂತೆ. ಈ ಕುರಿತಂತೆ ಅರವಿಂದ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಮಹಿಳೆ ಹಾಗೂ ಆಕೆಯ ಜೊತೆಗಿರುವವರನ್ನು ಕೂಡಲೇ ಬಂಧಿಸಲಾಗುವುದು ಎಂದು ಬಿಲ್ಹಾಪುರ ಠಾಣೆಯ ಮುಖ್ಯಸ್ಥ ಜಗದೀಶ್ ಪಾಂಡೆ ಹೇಳಿದ್ದಾರೆ.