ದೀಪಾವಳಿ ಅಂದ್ರೆ ಸಂಭ್ರಮ ಸಡಗರ ಇದ್ದಿದ್ದೇ. ಸ್ನೇಹಿತರು, ಸಂಬಂಧಿಕರು, ಆತ್ಮೀಯರಿಗೆಲ್ಲ ಉಡುಗೊರೆ, ಸಿಹಿ ಕೊಡುವುದು ದೀಪಾವಳಿಯ ಸಂಪ್ರದಾಯ. ಈ ಬಾರಿ ಉಡುಗೊರೆಯಾಗಿ ಏನು ಕೊಡೋದು ಅನ್ನೋ ಗೊಂದಲ ಎಲ್ಲರನ್ನೂ ಕಾಡುತ್ತದೆ. ಕೆಲವೊಂದು ಗಿಫ್ಟ್ ಐಡಿಯಾಗಳು ಇಲ್ಲಿವೆ. ವಿಶೇಷ ಅಂದ್ರೆ ಈ ಉಡುಗೊರೆಗಳ ಬೆಲೆ 500 ರೂಪಾಯಿ ಮೀರುವುದಿಲ್ಲ.
ಸ್ನೇಹಿತರಿಗೆ ಉಡುಗೊರೆಯಾಗಿ ಟೀಲೈಟ್ ಕ್ಯಾಂಡಲ್ ಸ್ಟ್ಯಾಂಡ್‌ಗಳನ್ನು ಕೊಡಬಹುದು. ಇದೊಂದು ಉತ್ತಮ ಆಯ್ಕೆ. 500 ರೂಪಾಯಿ ಬಜೆಟ್‌ನಲ್ಲಿ ಸುಂದರವಾದ ಟೀಲೈಟ್ ಕ್ಯಾಂಡಲ್‌ಗಳು ಸಿಗುತ್ತವೆ. ಈ ಉಡುಗೊರೆಯನ್ನು ಎಲ್ಲರೂ ಇಷ್ಟಪಡುತ್ತಾರೆ.
ದೀಪಾವಳಿಯಂದು ಕುಟುಂಬದ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಉಡುಗೊರೆಯಾಗಿ ವಾಸ್ತುಗೆ ಸಂಬಂಧಿಸಿದ ವಸ್ತುಗಳನ್ನು ಕೊಡಬಹುದು. ಲಕ್ಷ್ಮಿ ಮತ್ತು ಗಣೇಶ ಮೂರ್ತಿಗಳನ್ನು ಸಹ ಉಡುಗೊರೆಯಾಗಿ ನೀಡಬಹುದು.
ದೀಪಾವಳಿಯಂದು ಎಲ್ಲರೂ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ ಅಲಂಕರಿಸುತ್ತಾರೆ, ಹಾಗಾಗಿ ನೀವು ಗಿಫ್ಟ್ ಆಗಿ ಪರ್ಫ್ಯೂಮ್ ಡಿಫ್ಯೂಸರ್ ಅನ್ನು ಕೊಡಬಹುದು. ಇದು ನಿಮ್ಮ ಬಜೆಟ್‌ಗೆ ಸರಿಹೊಂದುತ್ತದೆ. ಬೆಳಕಿನ ಹಬ್ಬದಲ್ಲಿ ದೀಪಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ನೀವು ಸುಂದರವಾದ ದೀಪಗಳನ್ನು ಉಡುಗೊರೆಯಾಗಿ ನೀಡಬಹುದು.
ದೀಪಾವಳಿಯ ಸಂದರ್ಭದಲ್ಲಿ ಮನೆಯೊಳಗಡೆ ಬೆಳೆಸುವಂತ ಪ್ಲಾಂಟ್‌ಗಳನ್ನು ಕೊಡುವುದು ಕೂಡ ಸೂಕ್ತವೆನಿಸುತ್ತದೆ. ಸಾಮಾನ್ಯವಾಗಿ ಈ ಸಸ್ಯಗಳು ಎಲ್ಲರಿಗೂ ಇಷ್ಟವಾಗುತ್ತವೆ. ಇವು ನಿಮ್ಮ ಬಜೆಟ್‌ನಲ್ಲಿ ಸುಲಭವಾಗಿ ಲಭ್ಯವಿರುತ್ತವೆ.