alex Certify BIG NEWS: ಪ್ರೀತಿಸಿ ಮದುವೆಯಾದ ಜೋಡಿ; ನಾಲ್ಕು ತಿಂಗಳಲ್ಲೇ ಪತ್ನಿಯನ್ನೇ ಕೊಲೆಗೈದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರೀತಿಸಿ ಮದುವೆಯಾದ ಜೋಡಿ; ನಾಲ್ಕು ತಿಂಗಳಲ್ಲೇ ಪತ್ನಿಯನ್ನೇ ಕೊಲೆಗೈದ ಪತಿ

ಬೆಂಗಳೂರು: ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮನೆಯವರನೇಲ್ಲ ಒಪ್ಪಿಸಿ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾದ ದಂಪತಿ ನಡುವೆ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಪತಿ ಮಹಾಶಯ ಪತ್ನಿಯನ್ನೇ ಕೊಲೆಗೈದು ನೇಣು ಬಿಗಿದಿರುವ ಆರೋಪ ಕೇಳಿಬಂದಿದೆ. ನಿಹಾರಿಕಾ ಮೃತ ಮಹಿಳೆ. ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ನಾಲ್ಕು ವರ್ಷಗಳ ಕಾಲ ಪ್ರೀತಿಸಿದ್ದ ಜೋಡಿ, ಮನೆಯವನ್ನೆಲ್ಲ ಒಪ್ಪಿಸಿ ನಾಲ್ಕು ತಿಂಗಳ ಹಿಂದೆ ಅದ್ದೂರಿಯಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಮದುವೆ ಬಳಿಕ ಪತಿ ಮಹಾಶಯ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ನಿಹಾರಿಕಾ ಅಕ್ಕನ ಮನೆಗೆ ಹೋಗಿ ವಾಸವಾಗಿದ್ದಳು.

ಎರಡು ದಿನಗಳ ಹಿಂದೆ ಪತ್ನಿಯನ್ನು ಮನೆಗೆ ಕರೆದೊಯ್ಯುವುದಾಗಿ ಹೇಳಿ ನಿಹಾರಿಕಾಳನ್ನು ಕರೆತಂದ ಪತಿ ಮತ್ತೆ ಪತ್ನಿಯೊಂದಿಗೆ ಜಗಳ ಶುರುಮಾಡಿದ್ದಾನೆ. ಇದೀಗ ನಿಹಾರಿಕಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದೆ. ಮಗಳನ್ನು ಅಳಿಯನೇ ಕೊಲೆ ಮಾಡಿ ನೆಣು ಹಾಕಿದ್ದಾಗಿ ಕುಟುಂಬದವರು ಆರೋಪಿಸಿದ್ದು, ಪುಣ್ಣೇನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...