ರಾಮನಗರ: ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ರಾಮನಗರದ ಮಡಿಲು ನಿರಾಶ್ರಿತರ ಹಾಗೂ ವೃದ್ಧಾಶ್ರಮದಲ್ಲಿ ನಡೆದಿದೆ.
ರಾಮನಗರದ ಕೆಂಪೇಗೌಡ ಸರ್ಕಲ್ ನಲ್ಲಿರುವ ಅಮ್ಮನ ಮಡಿಲು ಎಂಬ ಆಶ್ರಮದಲ್ಲಿ ಈ ಘಟನೆ ನಡೆದಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಆಶ್ರಯ ನೀಡುವುದಾಗಿ ಹೇಳಿ ಯುವತಿಯನ್ನು ಕರೆದೊಯ್ದು ಆಕೆಗೆ ಬಲವಂತದಿಂದ ವಿವಾಹ ಮಾಡಿ ಬಳಿಕ ಮೂರು ತಿಂಗಳ ಕಾಲ ಆಶ್ರಮದಲ್ಲಿ ಇಟ್ಟುಕೊಂಡು ಕಿರುಕುಳ ನೀಡಲಾಗಿದೆ ಎಂದು ನೊಂದ ಯುವತಿ ದೂರು ನೀಡಿದ್ದಾರೆ. ಆಶ್ರಮದ ಮಾಲಕಿ ಪ್ರೀತಿ, ಆಕೆಯ ಸ್ನೇಹಿತೆ ಸೌಮ್ಯ, ಯೋಗೇಶ್ ಕಿರುಕುಳ ನೀಡಿ ಚಿತ್ರಹಿಂಸೆ ನೀಡಿದ್ದಾರೆ ಎಂದು ರಾಮನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.
ಬಸ್ ನಿಲ್ದಾಣದಲ್ಲಿ ಸಿಕ್ಕ ಯುವತಿಯನ್ನು ಆಶ್ರಯ ಕೊಡುವುದಾಗಿ ಹೇಳಿ ಕರೆದುಕೊಂಡು ಬಂದು ಆಶ್ರಮದಲ್ಲಿ ಇಡಲಾಗಿತ್ತು. ಯೋಗೇಶ್ ಎಂಬಾತ ಯುವತಿಯ ಮುಗ್ಧತೆಯನ್ನು ಬಳಸಿಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಅಲ್ಲದೇ ಯುವತಿ ಗರ್ಭಪಾತ ಮಾಡಿಸಿದ್ದರು ಎಂದು ಆರೋಪಿಸಲಾಗಿದೆ.