ರಾಯ್ಪುರ: ಛತ್ತೀಸ್ ಗಢದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ಶುಶ್ರೂಷಕಿಯೊಬ್ಬಳ ಮೇಲೆ 17 ವರ್ಷದ ಅಪ್ರಾಪ್ತ ಸೇರಿದಂತೆ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ನಡೆದಿದೆ.
ಅಪ್ರಾಪ್ತ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನಾಲ್ಕನೆಯವ ಪರಾರಿಯಾಗಿದ್ದಾನೆ. ತನ್ನ ಸಹೋದ್ಯೋಗಿಗಳೆಲ್ಲರೂ ದೀಪಾವಳಿಗೆ ರಜೆ ಇದ್ದ ಕಾರಣ ನರ್ಸ್ ಒಬ್ಬರೇ ಕೆಲಸ ಮಾಡುತ್ತಿದ್ದರು.
ಛತ್ತೀಸ್ ಗಢದ ಹೊಸದಾಗಿ ರೂಪುಗೊಂಡ ಮನೇಂದ್ರಗಢ-ಚಿರ್ಮಿನಿ-ಭರತ್ಪುರ ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ಒಬ್ಬಳೇ ಇದ್ದುದನ್ನು ಆರೋಪಿಗಳು ಗಮನಿಸಿ ಒಳಗೆ ನುಗ್ಗಿದ್ದಾರೆ. ಹಗ್ಗಗಳನ್ನು ಬಳಸಿ ಆಕೆಯನ್ನು ಕಟ್ಟುಹಾಕಿ ಒತ್ತೆಯಾಳಾಗಿ ಇರಿಸಿಕೊಂಡು ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ. ಹಲ್ಲೆ ಕೂಡ ಮಾಡಿದ್ದಲ್ಲದೇ, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ನರ್ಸ್ ಆರೋಪಿಸಿದ್ದಾರೆ.
ತನ್ನ ಕೆಲಸದ ಸ್ಥಳದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಮನೆಗೆ ತಲುಪಿದ ತಕ್ಷಣ ಪೋಷಕರು ಆಕೆಯನ್ನು ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ. ತಕ್ಷಣ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಮೇಶ್ ಬಾರಯ್ಯ ಹೇಳಿದ್ದಾರೆ.