ಬೆಳಗಾವಿ: ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ದಿಢೀರ್ ಕುಸಿತದಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯಾಗಿ ಗ್ರಾಹಕರು ತತ್ತರಿಸಿ ಹೋಗಿದ್ದಾರೆ.
ಅಕಾಲಿಕ ಮಳೆ, ಅತಿವೃಷ್ಟಿ ಕಾರಣ ಹೊಸ ಈರುಳ್ಳಿ ಬೆಳೆ ಹಾನಿಯಾಗಿದೆ. ಮಾರುಕಟ್ಟೆಗೆ ಈರುಳ್ಳಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಹಳೆ ಈರುಳ್ಳಿಗೆ ಬಂಪರ್ ಬೆಲೆ ಬಂದಿದೆ. ಹಳೆ ಈರುಳ್ಳಿ ದರ ಕ್ವಿಂಟಲ್ ಗೆ 1200 ರೂ.ರಿಂದ 2000 ರೂ. ವರೆಗೆ ಮಾರಾಟವಾಗುತ್ತಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ದರ 20 ರಿಂದ 38 ರೂಪಾಯಿವರೆಗೆ ಇದೆ. ಅಕಾಲಿಕ ಮಳೆಯಿಂದ ಕೈಗೆ ಬಂದ ಅಲ್ಪ ಸ್ವಲ್ಪ ಬೆಳೆಗೆ ಬೆಲೆ ಇಲ್ಲದಂತಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ದಿಢೀರ್ ದರ ಇಳಿಕೆಯಿಂದ ಬೆಳೆಗಾರರು ಕಣ್ಣೀರು ಹಾಕುವಂತಾಗಿದೆ. ಹೊಸ ಈರುಳ್ಳಿ ದರ ಕ್ವಿಂಟಲ್ ಗೆ 450 ರಿಂದ 1200 ರೂ.ವರೆಗೆ ಇದೆ ಎಂದು ಹೇಳಲಾಗಿದೆ.