ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಹೈಕೋರ್ಟ್ ಗೆ ಸೋಮವಾರದಿಂದ ಬುಧವಾರದವರೆಗೆ ರಜೆ ನೀಡಲಾಗಿದೆ. ವಿಚಾರಣಾ ನ್ಯಾಯಾಲಗಳಿಗೆ ಮಂಗಳವಾರ ರಜೆ ನೀಡಿಲ್ಲ.
ಬೆಂಗಳೂರು ವಕೀಲರ ಸಂಘದಿಂದ ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರಿಗೆ ಮನವಿ ಮಾಡಿದ್ದು, ಮನವಿ ಸ್ವೀಕರಿಸಿದ ನ್ಯಾಯಮೂರ್ತಿಗಳು, ಹೈಕೋರ್ಟ್ ಗೆ ನೀಡಲಾಗುವ ರಜೆಗೆ ಅನುಗುಣವಾಗಿ ವಿಚಾರಣೆ ನ್ಯಾಯಾಲಯಗಳು ರಜೆ ನೀಡಲು ಸಂಬಂಧಿಸಿದಂತೆ ರಜೆಪಟ್ಟಿ ನೀಡಿದರೆ ಮುಂದಿನ ವರ್ಷದ ಕ್ಯಾಲೆಂಡರ್ ರೂಪಿಸುವಾಗ ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ.
ಹೈಕೋರ್ಟಿಗೆ ಮೂರು ದಿನ, ವಿಚಾರಣಾ ನ್ಯಾಯಾಲಯಗಳಿಗೆ ಎರಡು ದಿನ ರಜೆ ಇದೆ. ಇದನ್ನು ಸರಿಪಡಿಸಬೇಕೆಂದು ವಕೀಲರ ಸಂಘ ಮನವಿ ಮಾಡಿತ್ತು.