ಚೆನ್ನಾಗಿ ಕಾಣಲು ಯಾವ ರೀತಿ ಬಟ್ಟೆ ಧರಿಸಿದ್ರೆ ಸೂಕ್ತ ಅನ್ನೋದು ಮಹಿಳೆಯರಿಗೆ ಬಗೆಹರಿಯದ ಗೊಂದಲ. ತಮ್ಮ ಲುಕ್ ಹೇಗಿರಬೇಕು? ಸೀರೆ, ಚೂಡಿದಾರ್, ಕುರ್ತಾ, ಸ್ಕರ್ಟ್, ಜೀನ್ಸ್ ಹೀಗೆ ಯಾವುದರಲ್ಲಿ ಅಂದವಾಗಿ ಕಾಣ್ತೀನಿ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡೋದು ಸಹಜ. ಯಾವ ರೀತಿಯ ಬಟ್ಟೆ ಧರಿಸಿದ್ರೆ ಯಾರೇನು ಅಂದ್ಕೋತಾರೋ ಅನ್ನೋ ಆತಂಕ.
ಆದ್ರೆ ಸಂಶೋಧನೆಯೊಂದರ ಪ್ರಕಾರ ಶಾರ್ಟ್ ಸ್ಕರ್ಟ್, ಟೈಟ್ ಫಿಟಿಂಗ್ ಡ್ರೆಸ್ ಮತ್ತು ಲೋ ಕಟ್ ಉಡುಪು ತೊಟ್ಟರೆ ಎಲ್ರೂ ನಿಮ್ಮನ್ನು ಗಂಭೀರವಾಗಿ ಪರಿಗಣಿಸ್ತಾರಂತೆ. ಸುಮಾರು 21 ವರ್ಷ ವಯಸ್ಸಿನ 64 ವಿದ್ಯಾರ್ಥಿಗಳನ್ನು ಬಳಸಿಕೊಂಡು ಈ ಸಂಶೋಧನೆ ನಡೆಸಲಾಗಿದೆ.
ಎರಡು ದಿನ ಬೇರೆ ಬೇರೆ ತೆರನಾದ ಬಟ್ಟೆ ಧರಿಸಿ ಹೋದಾಗ ಜನರ ರಿಯಾಕ್ಷನ್ ಯಾವ ರೀತಿ ಇತ್ತು ಅನ್ನೋದನ್ನು ಪರೀಕ್ಷಿಸಲಾಗಿದೆ. ಮೊದಲನೆಯದಾಗಿ ಲೋ ಕಟ್ ಟಾಪ್, ಮಿನಿ ಸ್ಕರ್ಟ್, ಜಾಕೆಟ್ ಧರಿಸಿದ್ದು, ಎರಡನೆಯದರಲ್ಲಿ ಲಾಂಗ್ ಸ್ಕರ್ಟ್ ಹಾಗೂ ಪೂರ್ತಿ ಮೈಮುಚ್ಚುವಂತಹ ಟಾಪ್ ಧರಿಸಿದ ಫೋಟೋಗಳನ್ನು ಸಂಶೋಧನೆಗೆ ಬಳಸಲಾಗಿದೆ.
ಇಬ್ಬರಲ್ಲಿ ಯಾವ ರೀತಿಯ ಮಹಿಳೆಯರು ಇಷ್ಟವಾಗ್ತಾರೆ ಅಂತ ಕೇಳಿದಾಗ ಬಹುತೇಕ ಎಲ್ಲರೂ ಮಿನಿ ಸ್ಕರ್ಟ್, ಶಾರ್ಟ್ ಟಾಪ್, ಲೋ ಕಟ್ ಡ್ರೆಸ್ ಧರಿಸಿದವರ ಕಡೆಗೆ ಒಲವು ತೋರಿದ್ದಾರೆ. ಈ ರೀತಿಯ ಬಟ್ಟೆ ಧರಿಸಿದವರು ಹೆಚ್ಚು ವಿಶ್ವಾಸಾರ್ಹರು ಮತ್ತು ಬುದ್ಧಿವಂತರು ಅಂತಾ ಅಭಿಪ್ರಾಯಪಟ್ಟಿದ್ದಾರೆ.