ರಾಮನಗರ: ಮುಂದಿನ ಬಾರಿಯೂ ಚನ್ನಪಟ್ಟಣದಿಂದ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸುವುದಾಗಿ ಹೇಳಿರುವುದಕ್ಕೆ ಅವರ ಹೇಳಿಕೆಯನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕೂಡ ಜನರೇ ತೀರ್ಮಾನ ಮಾಡುತ್ತಾರೆ ಎಂದು ರಾಮನಗರದಲ್ಲಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ. ಯಾರೋ ಒಬ್ಬರಿಂದ ಸರ್ಕಾರ ಬೀಳಿಸಲು ಸಾಧ್ಯವೇ? ಕುಮಾರಸ್ವಾಮಿ ಸುಮ್ಮನೆ ಅವರಿವರ ಮೇಲೆ ಆರೋಪ ಮಾಡುತ್ತಾರೆ. ನಮ್ಮ ನಡವಳಿಕೆ ಮೇಲೆ ಅಧಿಕಾರಿಗಳ ನಡವಳಿಕೆ ಆಧರಿಸಿರುತ್ತದೆ. ಅಧಿಕಾರಿಗಳನ್ನು ಹೆದರಿಸುವುದು ಕುಮಾರಸ್ವಾಮಿ ಗುಣ. ನನ್ನ ಮೇಲೆಯೂ ಬೇರೆ ಕಡೆ ಗೂಂಡಾಗಳನ್ನು ಕರೆಸಿ ಛೂ ಬಿಟ್ಟಿದ್ದರು ಎಂದು ಹೇಳಿದ್ದಾರೆ.
ಕೇತಗಾನಹಳ್ಳಿ ಸಮೀಪ ಕುಮಾರಸ್ವಾಮಿ ದಲಿತರ ಜಮೀನು ಕಬಳಿಸಿದ್ದಾರೆ. ದಲಿತರ ಜಮೀನಿನಲ್ಲಿ ಟಿಪ್ಪುಸುಲ್ತಾನ್ ರೀತಿ ಕೋಟೆ ಕಟ್ಟಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.