ಬೆಂಗಳೂರು: ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ 100 ರೂಪಾಯಿ ದೇಣಿಗೆ ಸಂಗ್ರಹ ಸುತ್ತೋಲೆಯನ್ನು ಎಸ್ ಡಿ ಎಂ ಸಿ ಗಳ ಸಲಹೆ ಮೇರೆಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ಸುತ್ತೋಲೆಯನ್ನು ಸರ್ಕಾರದ ಗಮನಕ್ಕೆ ತಂದು ಹೊರಡಿಸಬೇಕಿಲ್ಲ. ಇದು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆ. ಎಸ್ ಡಿ ಎಂ ಸಿ ಸಲಹೆ ಮೇರೆಗೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.
ಸುತ್ತೋಲೆಗೂ ಶಿಕ್ಷಣ ಸಚಿವರಿಗೂ, ಮುಖ್ಯಮಂತ್ರಿಗಳಿಗೂ ಸಂಬಂಧವಿಲ್ಲ. ಸುತ್ತೋಲೆ ಸರಿಯಾಗಿ ಓದದೇ ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ. ಅವರಾಗಿಯೇ ತಿಂಗಳಿಗೆ ನೂರು ರೂಪಾಯಿ ಕೊಟ್ಟರೆ ರಶೀದಿ ಕೊಡಬೇಕು. ಹಣ ಸಂಗ್ರಹಕ್ಕೆ ಆರ್ ಟಿ ಇ ಕಾಯ್ದೆಯಲ್ಲಿ ಅವಕಾಶವಿದೆ. ಆರ್ ಟಿ ಇ ಒಳ್ಳೆಯ ಕಾಯ್ದೆ. ಜಾರಿಗೆ ತಂದದ್ದು ಸಿದ್ದರಾಮಯ್ಯ ಎಂದು ಹೇಳಿದ್ದಾರೆ.