ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇನ್ಫೋಸಿಸ್, ತನ್ನ ಉದ್ಯೋಗಿಗಳಿಗೆ ದೀಪಾವಳಿಗೂ ಮುನ್ನವೇ ಗುಡ್ ನ್ಯೂಸ್ ನೀಡಿದೆ. ಉದ್ಯೋಗಿಗಳ ವೇತನದಲ್ಲಿ ಶೇಕಡ 10 ರಿಂದ 13 ರಷ್ಟು ಹೆಚ್ಚಳ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಉನ್ನತ ಕೌಶಲ್ಯ ತೋರಿರುವ ಉದ್ಯೋಗಿಗಳಿಗೆ ಶೇಕಡ 20 ರಿಂದ 25ರಷ್ಟು ಹೆಚ್ಚಿನ ವೇತನ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಇದರ ಜೊತೆಗೆ ಉದ್ಯೋಗಿಯ ಕಾರ್ಯಕ್ಷಮತೆಯನ್ನು ಆಧರಿಸಿ ಇಂಕ್ರಿಮೆಂಟ್ ನೀಡಲಾಗುತ್ತದೆ.
ಅಲ್ಲದೆ ಇನ್ಫೋಸಿಸ್ ನಲ್ಲಿ 9 ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದವರಿಗೆ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಬಡ್ತಿ ನೀಡಲಾಗುತ್ತಿದ್ದು, ಆದರೆ ಉದ್ಯೋಗಿ ತನ್ನ ಕೌಶಲ್ಯವನ್ನು ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾದರೆ ಏಳು ವರ್ಷಗಳಿಗೇ ಈ ಅವಕಾಶ ಸಿಗಬಹುದಾಗಿದೆ.