alex Certify ಟಾಟಾ ಮೋಟಾರ್ ಸಂಸ್ಥೆಯ ಇವಿ ಕಾರ್‌ ಬಿಡುಗಡೆ; ಒಂದು ಕಿ.ಮೀ.ಗೆ ಕೇವಲ 80 ಪೈಸೆ ವೆಚ್ಚ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಟಾ ಮೋಟಾರ್ ಸಂಸ್ಥೆಯ ಇವಿ ಕಾರ್‌ ಬಿಡುಗಡೆ; ಒಂದು ಕಿ.ಮೀ.ಗೆ ಕೇವಲ 80 ಪೈಸೆ ವೆಚ್ಚ

ಶಿವಮೊಗ್ಗ: ಭಾರತದ ಟಾಟಾ ಮೋಟಾರ್ ಸಂಸ್ಥೆ ವತಿಯಿಂದ ಉತ್ಪಾದಿಸಲಾಗಿರುವ ವಿದ್ಯುತ್ ಚಾಲಿತ (ಇವಿ) ಕಾರ್ ಅನ್ನು ನಗರದ ಆದಿಶಕ್ತಿ ಕಾರ್ ಶೋರೂಂನಲ್ಲಿ ಗುರುವಾರ ಸಂಜೆ ಬಿಡುಗಡೆ ಮಾಡಲಾಯಿತು.

ಕಾರು ಬಿಡುಗಡೆ ಮಾಡಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್, ಟಾಟಾ ಮೋಟಾರ್ ಸಂಸ್ಥೆ ನಮ್ಮ ಮನೆಯ ಸಂಸ್ಥೆಯಂತಿದೆ. ಅದರ ಬಗ್ಗೆ ಜನರಿಗೆ ಗೌರವವಿದೆ. ವಿದೇಶೀ ಕಾರು ತಯಾರಿಕಾ ಕಂಪೆನಿಗಳ ಮಧ್ಯೆ ಟಾಟಾ ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ಇವಿ ಕಾರನ್ನು ಉತ್ಪಾದಿಸುವ ಮೂಲಕ ಸಾಕಷ್ಟು ಹೆಸರು ಮಾಡಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕಲ್ ಕಾರುಗಳ ಸಾಮ್ರಾಜ್ಯವೇ ತೆರೆದುಕೊಳ್ಳಲಿದೆ. ಹೊಸ ಆವಿಷ್ಕಾರ ಬಂದಾಗ ತಪ್ಪು ಮತ್ತು ಸರಿಗಳು ಇರುತ್ತವೆ. ಒಳ್ಳೆಯದನ್ನು ನಾವು ಸ್ವಾಗತಿಸಬೇಕು. ಇದರ ಮಧ್ಯೆಯೇ ಹೊಸ ಇವಿ ಕಾರುಗಳು ಬಂದಾಗ ನಿರುದ್ಯೋಗದ ಮೇಲೆಯು ಪರಿಣಾಮ ಬೀರಬಹುದು. ಪರಿಸರ ಪ್ರೇಮಿ ಎನ್ನುವುದು ನಿಜ. ಆದರೆ ಯಾವುದೇ ಹೊಸ ಆವಿಷ್ಕಾರಗಳು ಪರಿಸರಕ್ಕೂ ಮತ್ತು ಮಾನವನಿಗೂ ಸ್ನೇಹ ಬೆಸೆಯುವಂತಿರಬೇಕು ಎಂದರು.

ಸಂಸ್ಥೆಯ ಪ್ರತಿನಿಧಿ ಇಮಾಂಶ್ ಮಾತನಾಡಿ, ನೆಕ್ಸನ್ ಇವಿ ಕಾರು ಹೊಸ ಆವಿಷ್ಕಾರ ಪಡೆದಿದೆ. ಪರಿಸರ ಪ್ರೇಮಿಯಾಗಿದೆ. ಈ ಕಾರ್ ಕೊಂಡಲ್ಲಿ ರೋಡ್ ಟ್ಯಾಕ್ಸ್ ಇರುವುದಿಲ್ಲ. ಜಿಎಸ್ಟಿ ಕೂಡ ಶೇ.5ರಷ್ಟು ಮಾತ್ರ ಇರುತ್ತದೆ. 8 ವರ್ಷ ವಾರಂಟಿ ಇರುತ್ತದೆ. ವಿಮೆ ಸೌಲಭ್ಯವೂ ಇರುತ್ತದೆ. ಮಧ್ಯಮ ವರ್ಗದವರಿಗೆ ಅನುಕೂಲಕರವಾಗಿದೆ. ಒಮ್ಮೆ ಬ್ಯಾಟರೀ ಚಾರ್ಜ್ ಮಾಡಿದರೆ 315ರಿಂದ 430 ಕಿ.ಮೀ.ವರೆಗೂ ಬರುತ್ತದೆ. ಒಂದು ಕಿ.ಮೀ.ಗೆ ಕೇವಲ 80 ಪೈಸೆ ಬೀಳುತ್ತದೆ. ಬ್ಯಾಟರೀ ಚಾರ್ಜ್ ಕೂಡ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಸಂಸ್ಥೆ ವತಿಯಿಂದ ಮನೆಗೆ ಬಂದು ಚಾರ್ಜ್ ಮಾಡಿಕೊಡಲಾಗುತ್ತದೆ. 12.67 ಲಕ್ಷದಿಂದ ಪ್ರಾರಂಭವಾಗಿ 19.59 ಲಕ್ಷದವರೆಗೆ ಕಾರುಗಳು ಸಿಗುತ್ತವೆ. ದೀಪಾವಳಿ ಹಬ್ಬಕ್ಕೆ 36ಸಾವಿರ ರೂ. ಉಳಿತಾಯ ಮಾಡಿಕೊಳ್ಳಬಹುದು ಎಂದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...