ಹಿಂದೂ ಪಂಚಾಂಗದ ಪ್ರಕಾರ ಅಕ್ಟೋಬರ್ 22 ರಂದು ಶನಿವಾರದಂದೇ ಕಾರ್ತಿಕ ಮಾಸದ ತ್ರಯೋದಶಿ ಪ್ರಾರಂಭವಾಗುತ್ತದೆ. ಈ ದಿನದ ಪ್ರದೋಷವನ್ನು ಶನಿ ತ್ರಯೋದಶಿ ಎಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಂದೇ ಧನ ತ್ರಯೋದಶಿ ಕೂಡ ಆಚರಣೆ ಮಾಡಲಾಗ್ತಿದೆ. ಹಾಗಾಗಿ ಈ ದಿನ ಬಹಳ ವಿಶೇಷವಾಗಿದೆ. ಈ ದಿನ ಈಶ್ವರ, ಶನಿ ಮತ್ತು ಧನ್ವಂತರಿ ದೇವರನ್ನು ಪೂಜಿಸುವುದು ಒಳ್ಳೆಯದು.
ಶನಿ ಧೈಯ ಹಾಗೂ ಸಾಡೇ ಸಾಥ್ ಶನಿ ದೋಷ ಇರುವವರು ಈ ದಿನ ವಿಶೇಷ ಪೂಜೆ ಮಾಡಬೇಕು. ಈ ದಿನ ಮಾಡುವ ಒಳ್ಳೆಯ ಕೆಲಸದಿಂದ ಸುಖ, ಸಂಪತ್ತು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯ ಪ್ರಾಪ್ತಿಯಾಗುತ್ತದೆ.
ಶನಿ ದೇವನ ಆಶೀರ್ವಾದ ಪಡೆಯಲು ಶನಿ ತ್ರಯೋದಶಿಯ ದಿನದಂದು ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಬೇಕು. ಶಿವಲಿಂಗದ ಮೇಲೆ ಕಪ್ಪು ಎಳ್ಳು ಮತ್ತು ನೀಲಿ ಹೂವುಗಳನ್ನು ಅರ್ಪಿಸಬೇಕು. ಹೀಗೆ ಮಾಡಿದ್ರೆ ನೋವಿನಿಂದ ಮುಕ್ತಿ ಸಿಗುತ್ತದೆ.
ಶನಿಯ ಕೃಪೆ ನಿಮ್ಮ ಮೇಲೆ ಆಗಬೇಕು ಎಂದಾದ್ರೆ ನೀವು ಶನಿ ತ್ರಯೋದಶಿಯಂದು ಉಪವಾಸ ಮಾಡಬೇಕು. ಹಾಗೆ ಈ ದಿನದಂದು ಅಗತ್ಯವಿರುವವರಿಗೆ ಆಹಾರ, ಬಟ್ಟೆಗಳನ್ನು ದಾನ ಮಾಡಬೇಕು. ಶೂ ಮತ್ತು ಚಪ್ಪಲಿಯನ್ನೂ ಕೂಡ ನೀವು ದಾನ ಮಾಡಬಹುದು.
ಈ ದಿನ ಪ್ರದೋಷದ ಸಮಯದಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡಬೇಕು. ನಂತರ ಶಿವ ಚಾಲೀಸ ಮತ್ತು ಶಿವ ಸ್ತೋತ್ರವನ್ನು ಪಠಿಸಬೇಕು. ಶನಿ ದೇವರಿಗೆ ಎಣ್ಣೆಯಿಂದ ಅಭಿಷೇಕ ಮಾಡಬೇಕು. ಸಾಡೇ ಸಾಥ್ ಶನಿದೋಷ ಪರಿಹಾರ ಇದ್ರಿಂದಾಗುತ್ತದೆ.