ಪ್ರಾಣಿಗಳನ್ನು ಕಂಡು ಕುಚೇಷ್ಠೆ ಮಾಡಲು ಹೋಗಿ ಪೇಚಿಗೆ ಸಿಲುಕುವವರು ಹಲವರು. ಅದರಲ್ಲಿಯೂ ಮಂಗ ಎಂದರೇನೆ ಚೇಷ್ಠೆಗೆ ಹೆಸರುವಾಸಿ. ಅಂಥ ಮಂಗನಿಗೆ ಕಿರಿಕ್ ಮಾಡಲು ಹೋದರೆ ಸುಮ್ಮನೆ ಬಿಡುವುದೆ? ಮಂಗನಿಗೇ ಚೇಷ್ಠೆ ಮಾಡಲು ಹೋಗಿ ವ್ಯಕ್ತಿಯೊಬ್ಬ ತೊಂದರೆಗೆ ಸಿಲುಕಿರುವ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಕೋತಿಯ ಮೇಲೆ ಕಲ್ಲು ಎಸೆಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಸುಮ್ಮನೇ ಎಲ್ಲಿಯೋ ಇದ್ದ ಕೋತಿಗೆ ಈತ ಕಲ್ಲು ಎಸೆದಿದ್ದಾನೆ. ಆದರೆ ಆತನ ಗ್ರಹಚಾರ ನೆಟ್ಟಗಿರಲಿಲ್ಲ.
ಚಂಗನೆ ನೆಗೆದು ಬಂದ ಕೋತಿ ಈತನ ಮೇಲೆ ಎರಗಿ ಆತನನ್ನು ಬೀಳಿಸಿ ಅಷ್ಟೇ ಶರವೇಗದಲ್ಲಿ ಮಾಯವಾಗಿದೆ. ಇಷ್ಟಾದರೂ ಬುದ್ಧಿ ಕಲಿಯದ ಈ ವ್ಯಕ್ತಿ, ತನ್ನನ್ನು ಬೀಳಿಸಿದ ಮಂಗನ ಹುಡುಕಾಟದಲ್ಲಿ ತೊಡಗಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಹಲವಾರು ಕಮೆಂಟ್ಸ್ಗಳ ಜತೆ ಇದು ಶೇರ್ ಆಗುತ್ತಿದೆ.