ಕೋವಿಡ್ ಬಳಿಕ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆ ಚೇತರಿಸಿಕೊಳ್ತಾ ಇದೆ. ಸ್ಕೂಟರ್ ವಿಭಾಗದಲ್ಲಂತೂ MoM ಮತ್ತು YoY ಮಾರಾಟ ಸ್ಥಿರವಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಕೂಡ ಸ್ಕೂಟರ್‌ಗಳಿಗೆ ಸಾಕಷ್ಟು ಬೇಡಿಕೆಯಿತ್ತು. ಈ ತಿಂಗಳಿನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳು ಯಾವುವು ಅನ್ನೋದನ್ನು ನೋಡೋಣ.
ಹೋಂಡಾ ಆಕ್ಟಿವಾ: ಭಾರತದ ಸ್ಕೂಟರ್ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಕ್ರಾಂತಿಯನ್ನೇ ಮಾಡಿದೆ. ಪ್ರಬಲ ಪ್ರತಿಸ್ಪರ್ಧಿಗಳಿದ್ದರೂ ಹೋಂಡಾ ಆಕ್ಟಿವಾ ಸ್ಕೂಟರ್‌ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಜಪಾನ್ ಮೂಲದ ಈ ಕಂಪನಿ ಸಪ್ಟೆಂಬರ್‌ನಲ್ಲಿ 2,45,607 ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.
TVS ಜುಪಿಟರ್: ಎರಡನೇ ಸ್ಥಾನದಲ್ಲಿರುವ TVS ಜುಪಿಟರ್, 82,394 ಸ್ಕೂಟರ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಟಿವಿಎಸ್ ಸ್ಕೂಟರ್ ಮಾರಾಟವು ಶೇ.46ರಷ್ಟು ಹೆಚ್ಚಾಗಿರುವುದು ವಿಶೇಷ.
ಸುಜುಕಿ ಆಕ್ಸೆಸ್: ಈ ಕಂಪನಿಯ ಸ್ಕೂಟರ್‌ಗಳು ಕೂಡ ಗ್ರಾಹಕರನ್ನು ಸೆಳೆಯುತ್ತಿವೆ. ಸಪ್ಟೆಂಬರ್‌ನಲ್ಲಿ ಸುಜುಕಿ ಆಕ್ಸೆಸ್‌ನ 46,851 ಯುನಿಟ್‌ಗಳು ಮಾರಾಟವಾಗಿವೆ. ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಈ ಸ್ಕೂಟರ್ ಗ್ರಾಹಕರಿಗೆ ಇಷ್ಟವಾಗಿದೆ. ಪರಿಣಾಮ ಒಟ್ಟಾರೆ ಮಾರಾಟ ಶೇ.4ರಷ್ಟು ಹೆಚ್ಚಾಗಿದೆ.
TVS Ntorq: TVS Ntorq 125 ಸ್ಕೂಟರ್ ಆಗಿದ್ದು, ಇದನ್ನು ಅತ್ಯಂತ ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಟಿವಿಎಸ್ ಎನ್‌ಟಾರ್ಕ್ ಸಹ 125 ಸಿಸಿ ಪವರ್‌ಟ್ರೇನ್‌ನೊಂದಿಗೆ ಬರುತ್ತದೆ. ಕಾರ್ಯಕ್ಷಮತೆಯನ್ನು ಉತ್ತಮವಾಗಿದೆ. ಸೆಪ್ಟೆಂಬರ್‌ನಲ್ಲಿ Ntorq ಶ್ರೇಣಿಯ 31,497 ಸ್ಕೂಟರ್‌ಗಳು ಸೇಲ್ ಆಗಿದೆ. ಕಂಪನಿಯ ಮಾರಾಟ ಶೇ.7ರಷ್ಟು ಹೆಚ್ಚಾಗಿದೆ.
ಹೋಂಡಾ ಡಿಯೊ: ಹೋಂಡಾ ಡಿಯೊ, ಹೋಂಡಾ ಆಕ್ಟಿವಾ ಪ್ಲಾಟ್‌ಫಾರ್ಮ್ ಆಧಾರಿತ ಸೊಗಸಾದ ಸ್ಕೂಟರ್. ಹೋಂಡಾ ಡಿಯೊಗೂ ಸಾಕಷ್ಟು ಗ್ರಾಹಕರಿದ್ದಾರೆ. ಸೆಪ್ಟೆಂಬರ್ 2022 ರಲ್ಲಿ, ಹೋಂಡಾ ಭಾರತದಲ್ಲಿ 29,994 ಯುನಿಟ್ ಡಿಯೋ ಸ್ಕೂಟರ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಆದ್ರೆ ಮಾರಾಟ ಪ್ರಮಾಣ ಶೇ.13.2 ರಷ್ಟು ಕುಸಿತ ಕಂಡಿದೆ.
ಹೀರೋ ಪ್ಲೆಷರ್: ಹೀರೋ ಪ್ಲೆಷರ್ ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹೀರೋ ಸ್ಕೂಟರ್. ಹೋಂಡಾ ಆಕ್ಟಿವಾ, ಟಿವಿಎಸ್ ಜುಪಿಟರ್ಗೆ ಪೈಪೋಟಿ ಕೊಡಲು ಇದರಿಂದ ಸಾಧ್ಯವಾಗುತ್ತಿಲ್ಲ. ಕಳೆದ ತಿಂಗಳ 19,682 ಯುನಿಟ್‌ಗಳು ಮಾರಾಟವಾಗಿದ್ದರೂ, ಒಟ್ಟಾರೆ ಪ್ರಮಾಣ ಶೇ.9ರಷ್ಟು ಇಳಿಕೆಯಾಗಿದೆ.
ಹೀರೋ ಡೆಸ್ಟಿನಿ: ಹೀರೋ ಪ್ಲೆಷರ್ ಮತ್ತು ಹೀರೋ ಮೆಸ್ಟ್ರೋಗಿಂತ ಭಿನ್ನವಾಗಿದೆ ಹೀರೋ ಡೆಸ್ಟಿನಿ. ಸೆಪ್ಟೆಂಬರ್ 2022 ರಲ್ಲಿ 14,951 ಹೀರೋ ಡೆಸ್ಟಿನಿ ಸ್ಕೂಟರ್‌ಗಳು ಸೇಲ್ ಆಗಿವೆ. ಪರಿಣಾಮ ಮಾರಾಟದಲ್ಲಿ 21 ಪ್ರತಿಶತದಷ್ಟು ಏರಿಕೆಯಾಗಿದೆ.
ಸುಜುಕಿ ಬರ್ಗ್‌ಮ್ಯಾನ್: ಸುಜುಕಿ ಬರ್ಗನ್ ಅನ್ನು ಮ್ಯಾಕ್ಸಿ-ಸ್ಕೂಟರ್ ಆಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಇದು ವಾಸ್ತವವಾಗಿ ಸುಜುಕಿ ಆಕ್ಸೆಸ್ 125 ಸ್ಕೂಟರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಸೆಪ್ಟೆಂಬರ್ 2022 ರಲ್ಲಿ, ಸುಜುಕಿ ಭಾರತದಲ್ಲಿ 12,875 ಯೂನಿಟ್ ಬರ್ಗ್‌ಮ್ಯಾನ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಮಾರಾಟದಲ್ಲಿ ಶೇ.48.5 ಹೆಚ್ಚಳವಾಗಿದೆ.
ಯಮಹಾ ಫ್ಯಾಸಿನೊ: ನವೀಕರಿಸಿದ ಯಮಹಾ ಫ್ಯಾಸಿನೊ ಹೆಚ್ಚು ಸ್ಟೈಲಿಶ್ ಆಗಿದೆ. ಜೊತೆಗೆ ಹೆಚ್ಚು ಶಕ್ತಿಶಾಲಿ 125cc ಪವರ್‌ಟ್ರೇನ್ ಅನ್ನು ಹೊಂದಿದೆ. ಸೆಪ್ಟೆಂಬರ್‌ನಲ್ಲಿ 10,348 ಯಮಹಾ ಫ್ಯಾಸಿನೊ ಸ್ಕೂಟರ್‌ಗಳು ಬಿಕರಿಯಾಗಿವೆ. ಪರಿಣಾಮವಾಗಿ ಮಾರಾಟದ ಪ್ರಮಾಣ ಶೇ.27 ರಷ್ಟು ಕುಸಿತ ಕಂಡಿದೆ.
TVS ಪೆಪ್+: TVS ಸ್ಕೂಟಿ ಪೆಪ್+ ಒಂದು ಕಾಂಪ್ಯಾಕ್ಟ್ ಸ್ಕೂಟರ್ ಆಗಿದ್ದು, ಸವಾರಿ ಮಾಡಲು ತುಂಬಾ ಸುಲಭ. ಅದರ ಕಾಂಪ್ಯಾಕ್ಟ್ ಆಯಾಮಗಳ ಹೊರತಾಗಿಯೂ, ಟಿವಿಎಸ್ ಸ್ಕೂಟಿ ಪೆಪ್ + ಯೋಗ್ಯ ಸ್ಥಳ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ. ಸೆಪ್ಟೆಂಬರ್ 2022 ರಲ್ಲಿ, TVS ಭಾರತದಲ್ಲಿ 9,518 ಯೂನಿಟ್ ಪೆಪ್ + ಸ್ಕೂಟರ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ.
ಸೆಪ್ಟೆಂಬರ್ 2022 ರಲ್ಲಿ ಒಟ್ಟಾರೆ ಸ್ಕೂಟರ್‌ಗಳ ಮಾರಾಟ ಪ್ರಮಾಣ ಶೇ.6ರಷ್ಟು ಹೆಚ್ಚಾಗಿರುವುದು ವಿಶೇಷ. ಇನ್ನು ಕೆಲವು ತಿಂಗಳುಗಳವರೆಗೆ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ. ಕಳೆದ ಐದು ವರ್ಷಗಳಲ್ಲಿ ಸ್ಕೂಟರ್‌ಗಳ ಮಾರುಕಟ್ಟೆ ಪಾಲು ಕೂಡ ಹೆಚ್ಚಾಗಿದೆ ಎನ್ನುತ್ತಾರೆ ತಜ್ಞರು.