ದೀಪಾವಳಿ ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ-ಸಾಂಸ್ಕೃತಿಕ ಹಬ್ಬವಾಗಿದೆ. ದೀಪಗಳ ಹಬ್ಬವಾದ ದೀಪಾವಳಿಯು ಲಕ್ಷ್ಮಿಯನ್ನು ಆಹ್ವಾನಿಸುವ ಹಬ್ಬವಾಗಿದೆ. ದೀಪಾವಳಿ ಶುಭ ಸಂದರ್ಭದಲ್ಲಿ ಮನೆ, ಅಂಗಡಿಗಳನ್ನು ಅಲಂಕಾರ ಮಾಡಲಾಗುತ್ತದೆ. ವಾಸ್ತು ನಿಯಮಗಳ ಪ್ರಕಾರ, ದಿಕ್ಕುಗಳು ಮತ್ತು ಬಣ್ಣಗಳನ್ನು ಗಮನದಲ್ಲಿಟ್ಟುಕೊಂಡು ಅಲಂಕಾರವನ್ನು ಮಾಡಿದರೆ ಲಕ್ಷ್ಮಿ ಒಲಿಯುತ್ತಾಳೆ. ಸಂತೋಷ, ಯಶಸ್ಸು ಮತ್ತು ಸಮೃದ್ಧಿ ನಿಮ್ಮದಾಗುತ್ತದೆ.
ಲಕ್ಷ್ಮಿ ಮನೆ ಪ್ರವೇಶ ಮಾಡುವುದು ಮುಖ್ಯ ದ್ವಾರದಿಂದ. ಹಾಗಾಗಿ ಮುಖ್ಯ ದ್ವಾರವನ್ನು ಸ್ವಚ್ಛವಾಗಿಡಬೇಕು. ಮೊದಲು ದ್ವಾರವನ್ನು ಸ್ವಚ್ಛಗೊಳಿಸಬೇಕು. ನಂತ್ರ ಸ್ವಸ್ತಿಕ, ಓಂ ಅಥವಾ ಯಾವುದಾದ್ರೂ ಶುಭ ಚಿಹ್ನೆಗಳನ್ನು ನೀವು ಬಿಡಿಸಬೇಕು. ಹಬ್ಬದ ದಿನ ಮಾವಿನ ಎಲೆಗಳ ತೋರಣ ಮಾಡಿ ಮುಖ್ಯ ದ್ವಾರಕ್ಕೆ ಹಾಕಬೇಕು. ಹೂಗಳನ್ನು ಕೂಡ ಮುಖ್ಯ ದ್ವಾರಕ್ಕೆ ಹಾಕಿ ಅಲಂಕಾರ ಮಾಡಬೇಕು.
ಈಶಾನ್ಯ ದಿಕ್ಕನ್ನು ನೀರು ಮತ್ತು ದೇವರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹೆಚ್ಚು ಧನಾತ್ಮಕ ಶಕ್ತಿ ಅಲ್ಲಿ ನೆಲೆಸಿರುತ್ತದೆ. ಹಾಗಾಗಿ ಈ ದಿಕ್ಕನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರಿನ ಪಾತ್ರೆಯನ್ನು ಅಲ್ಲಿ ಇಡುವುದರಿಂದ ಅದೃಷ್ಟ ಮನೆಗೆ ಬರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಕುಟುಂಬದ ಸದಸ್ಯರ ಆರೋಗ್ಯ ವೃದ್ಧಿ ಕೂಡ ಇದ್ರಿಂದ ಆಗುತ್ತದೆ.
ಲಕ್ಷ್ಮಿ ಪೂಜೆಯಲ್ಲಿ ತುಪ್ಪ ಅಥವಾ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಧನಾತ್ಮಕ ಶಕ್ತಿಯು ಹರಡುತ್ತದೆ. ದೀಪಾವಳಿಯ ದಿನದಂದು ಉತ್ತರ ದಿಕ್ಕಿನಲ್ಲಿ ಲಕ್ಷ್ಮಿ ಪೂಜೆಯ ದೀಪಗಳನ್ನು ಇಡುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಆಹಾರದ ಕೊರತೆಯಾಗುವುದಿಲ್ಲ.
ಸಂಪತ್ತು ಹೆಚ್ಚಾಗಬೇಕು, ರಾಕ್ಷಸರ ನಾಶವಾಗ್ಬೇಕು ಎಂದಾದ್ರೆ ಕುಬೇರನ ವಿಗ್ರಹವನ್ನು ಉತ್ತರ ದಿಕ್ಕಿನಲ್ಲಿಟ್ಟು ಪೂಜೆ ಮಾಡಿ.