ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತು ಈ ಹಿಂದಿನಿಂದಲೂ ಅಪಸ್ವರ ಕೇಳಿ ಬರುತ್ತಿದ್ದು, ಹಲವು ಬಾರಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟವರಿಗೆ ದೂರು ಸಹ ಸಲ್ಲಿಸಲಾಗಿದೆ.
ಆದರೆ ಇದ್ಯಾವುದನ್ನು ಪರಿಗಣಿಸದೆ ಕಳಪೆ ಕಾಮಗಾರಿ ಮುಂದುವರೆದಿದ್ದು, ಇದರ ಜೊತೆಗೆ ಅವೈಜ್ಞಾನಿಕ ಕೆಲಸ ನಡೆಯುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಹ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಶಿವಮೊಗ್ಗದ ನೂರು ಅಡಿ ರಸ್ತೆ ನಿರ್ಮಲ ನರ್ಸಿಂಗ್ ಹೋಮ್ ಬಳಿ ಹಾಕಿರುವ ಕಲ್ಲು ಹಾಸಿನ ಒಳಗಿನಿಂದ ಹೊಗೆ ಜೊತೆಗೆ ಶಬ್ದ ಬರುತ್ತಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಎಲೆಕ್ಟ್ರಿಕ್ ಕೇಬಲ್ ಮುಚ್ಚದಿರುವ ಕಾರಣ ಈ ರೀತಿ ಆಗಿದೆ ಎಂದು ಹೇಳಲಾಗುತ್ತಿದೆ.