ಬೆಂಗಳೂರು: ಚೈಲ್ಡ್ ಫೊರ್ನೊಗ್ರಫಿ ವಿಡಿಯೋಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ವಿರುದ್ಧ ಕೇಸ್ ದಾಖಲಾಗಿದೆ. ಮಧುಸೂಧನ್ ಆಚಾರ್ಯ ಎಂಬುವವರ ವಿರುದ್ಧ ಚೈಲ್ಡ್ ಫೊರ್ನೊಗ್ರಫಿ ಕೇಸ್ ದಾಖಲಾಗಿದೆ.
ಮಧುಸೂಧನ್ ಆಚಾರ್ಯ, ತಾನು ಕೆಲಸ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯೋರ್ವನಿಗೆ ಇನ್ ಸ್ಟಾಗ್ರಾಂ ಮೂಲಕ ವಿಡಿಯೋ ಕಳುಹಿಸಿದ್ದರು. ಮಕ್ಕಳ ಲೈಂಗಿಕ ವಿಡಿಯೋ ಕಳಿಸುವುದು, ನೋಡುವುದು ಹಾಗೂ ಸ್ಟೋರ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಪ್ರೊಫೆಸರ್ ಓರ್ವರಿಂದಲೇ ಇಂತಹ ವಿಡಿಯೋ ಕಳುಹಿಸುವ ಅಪರಾಧ ನಡೆದಿದ್ದು, ಇದೀಗ ಪ್ರಕರಣ ದಾಖಲಾಗಿದೆ.
ವಿಡಿಯೋ ಕಳುಹಿಸಿದ್ದನ್ನು ಮಾನಿಟರ್ ಮಾಡಿದ್ದ ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಆಂಡ್ ಎಕ್ಸ್ ಪ್ಲಾಯಿಟೆಡ್ ಚಿಲ್ಡ್ರನ್ ಪೋರ್ಟೆಲ್ ನಂತರ ಈ ಮಾಹಿತಿಯನ್ನು ಎನ್ ಸಿ ಆರ್ ಬಿಗೆ ನೀಡಲಾಗಿದೆ. ಬಳಿಕ ಎನ್ ಸಿ ಅರ್ ಬಿ ರಾಜ್ಯ ಸಿಐಡಿಗೆ ಸಿಡಿ ಸಹಿತ ಪ್ರಕರಣ ಮಾಹಿತಿ ನೀಡಿದೆ. ಈ ವೇಳೆ ಸೈಬರ್ ಕ್ರೈಂ ವಿಚಾರಣೆ ನಡೆಸಿದ್ದು, ಈ ವೇಳೆ ಯಲಹಂಕ ಬಳಿಯ ಪ್ರತಿಷ್ಠಿತ ಕಾಲೇಜಿನ ಬಗ್ಗೆ ಗೊತ್ತಾಗಿದೆ. ಐಪಿ ಅಡ್ರೆಸ್ ಸಹಿತ ಏರಿಯಾ ಪತ್ತೆ ಮಾಡಿದ್ದ ಪೊಲೀಸರು ಘಟನೆ ಸಂಬಂಧ ಪ್ರೊ.ಮಧುಸೂಧನ್ ಆಚಾರ್ಯ ನನ್ನು ವಿಚಾರಣೆ ನಡೆಸಿದ್ದಾರೆ. ಮಧುಸೂಧನ್ ಹಲವು ವಿದ್ಯಾರ್ಥಿಗಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಎಂಬುದು ತಿಳಿದುಬಂದಿದೆ. ಇದೀಗ ಸಿಇಎನ್ ಪೊಲೀಸರು ಕೇಸ್ ದಾಖಲಿಸಿದ್ದಾರೆ.