ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ದೊಡ್ಡ ಪರಿಣಾಮ ಬೀರಿದೆ. ಈಗ ಅದು ತನ್ನ ಪ್ರಭಾವ ಕ್ಷೀಣಿಸುವ ಲಕ್ಷಣಗಳನ್ನು ತೋರಿಸುತ್ತಿರಬಹುದು ಆದರೆ ಅದು ಮನುಕುಲದ ಮೇಲೆ ತೋರಿದ ಪರಿಣಾಮ ಎಂದಿಗೂ ಮರೆಯಲು ಸಾಧ್ಯವಿಲ್ಲ.
ಆದರೆ, ಲಾಕ್‌ಡೌನ್ ನಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಿತು. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಅನೇಕರು ಪೋಷಕರೂ ಆದರು. ಇಲ್ಲೊಂದು ಕುಟುಂಬ ಲಾಕ್‌ಡೌನ್ ನಂತರ ಹುಟ್ಟಿದ ತಮ್ಮ ಮಗುವಿಗೆ ಅಸಾಮಾನ್ಯ ಹೆಸರಿಟ್ಟಿದ್ದಾರೆ.
2021 ರಲ್ಲಿ ಎರಡನೇ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಜೋಡಿ ಗರ್ಭಿಣಿಯಾದರು. ಪತಿ ರಾಬ್ ಲಾಕ್‌ಡೌನ್ ಅನ್ನು ನೆನಪಿಟ್ಟುಕೊಳ್ಳಲು ತಮ್ಮ ಮಗುವಿಗೆ ಅಸಾಮಾನ್ಯ ಹೆಸರನ್ನು ಬಯಸಿದ್ದರು. ಹಾಗಾಗಿ ಕಳೆದ ವರ್ಷ ನವೆಂಬರ್ 28 ರಂದು ಅವರ ಮಗು ಜನಿಸಿದಾಗ ಅವರು ಲಾಕಿ ಎಂದು ಹೆಸರಿಸಿದ್ದಾರೆ.
ಸಾಂಕ್ರಾಮಿಕ ರೋಗದ ಹೊರತಾಗಿಯೂ ಲಾಕ್‌ಡೌನ್ ನಮ್ಮ ಜೀವನದಲ್ಲಿ ನಿಜವಾಗಿಯೂ ಒಳ್ಳೆಯ ಸಮಯ ಎಂದು ಜೋಡಿ ಹೇಳಿದೆ. ಅವರ ಹೆಸರಿನ ಆಯ್ಕೆಯ ಬಗ್ಗೆ ತನಗೆ ಯಾವುದೇ ವಿಷಾದವಿಲ್ಲ ಎಂದು ಅವರು ತಿಳಿಸಿದ್ದಾರೆ.