alex Certify ʼಲಕ್ಷ್ಮಿʼ ಒಲಿಸಿಕೊಳ್ಳಲು ದೀಪಾವಳಿ ಪೂಜೆ ವೇಳೆ ತಪ್ಪದೆ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಕ್ಷ್ಮಿʼ ಒಲಿಸಿಕೊಳ್ಳಲು ದೀಪಾವಳಿ ಪೂಜೆ ವೇಳೆ ತಪ್ಪದೆ ಮಾಡಿ ಈ ಕೆಲಸ

ದೀಪಾವಳಿಯಲ್ಲಿ ಸಂಪತ್ತು, ಸಂತೋಷ ಪ್ರಾಪ್ತಿಗೆ ತಾಯಿ ಲಕ್ಷ್ಮಿ ಪೂಜೆಯನ್ನು ಮಾಡ್ತೇವೆ. ಲಕ್ಷ್ಮಿ ಆರಾಧನೆಯಿಂದ ವರ್ಷವಿಡಿ ಸಂಪತ್ತು ಮನೆಯಲ್ಲಿರುತ್ತದೆ ಎಂದು ನಂಬಲಾಗಿದೆ. ಭಕ್ತರು ವಿಧಿವಿಧಾನಗಳ ಮೂಲಕ ಲಕ್ಷ್ಮಿ ಪೂಜೆ ಮಾಡಬೇಕು. ಲಕ್ಷ್ಮಿ ಪೂಜೆ ವೇಳೆ ಕೆಲ ನಿಯಮಗಳನ್ನು ಪಾಲನೆ ಮಾಡಿದ್ರೆ ತಾಯಿ ಬೇಗ ಒಲಿಯುತ್ತಾಳೆ.

ದೀಪಾವಳಿಯಲ್ಲಿ ಹಣ ಪ್ರಾಪ್ತಿಯಾಗ್ಬೇಕು, ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಬೇಕೆಂದ್ರೆ ಕೆಲವು ಉಪಾಯಗಳನ್ನು ನೀವು ಮಾಡಬೇಕಾಗುತ್ತದೆ. ಮೊದಲನೇಯದಾಗಿ ನೀವು ಲಕ್ಷ್ಮಿ ಪೂಜೆ ನಂತ್ರ  ಶಂಖವನ್ನು ಊದಬೇಕು. ಮನೆಯ ಮೂಲೆ ಮೂಲೆಗೆ ಶಂಖ ನಾದ ಕೇಳಿದ್ರೆ ಮನೆಯಲ್ಲಿರುವ ಬಡತನ ದೂರವಾಗುತ್ತದೆ.

ಪೂಜೆ ಮಾಡುವ ಜಾಗದಲ್ಲಿ ಲಕ್ಷ್ಮಿ, ಗಣೇಶ ಯಂತ್ರವನ್ನು ಸ್ಥಾಪಿಸಿ, ಪೂಜೆ ಮಾಡುವುದ್ರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. ಧನದ ಮಳೆಯಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ ಶ್ರೀ ಯಂತ್ರ, ಗಣೇಶ ಲಕ್ಷ್ಮಿ ಯಂತ್ರ, ಕುಬೇರ ಯಂತ್ರವನ್ನು ಪೂಜಿಸುವುದ್ರಿಂದ ಹೆಚ್ಚು ಲಾಭವನ್ನು ನೀವು ಪಡೆಯುತ್ತೀರಿ.

ದೀಪಾವಳಿಯಲ್ಲಿ ವಿಷ್ಣು ಮತ್ತು ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯಬೇಕು. ಲಕ್ಷ್ಮಿಗೆ ಕೆಂಪು ಬಣ್ಣದ ಬಟ್ಟೆಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಲಕ್ಷ್ಮಿಗೆ ನೀವು ಬಿಳಿ ಬಣ್ಣದ ಸ್ವೀಟನ್ನು ಲಕ್ಷ್ಮಿಗೆ ನೈವೇದ್ಯ ಮಾಡಬೇಕು. ನಂತ್ರ ಈ  ಸಿಹಿಯನ್ನು ನೀವು ಬಡವರಿಗೆ ನೀಡಬೇಕು. ಹೀಗೆ ಮಾಡಿದ್ರೆ ಸಾಲದಿಂದ ಮುಕ್ತಿ ಪಡೆಯಬಹುದಾಗಿದೆ. ಇದಲ್ಲದೆ ದೀಪಾವಳಿ ದಿನ ಅಶ್ವತ್ಥ ಮರದ ಕೆಳಗೆ 7 ದೀಪವನ್ನು ಹಚ್ಚಿ ಹಾಗೂ 7 ಪ್ರದಕ್ಷಣೆ ಮಾಡುವುದ್ರಿಂದ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗಲಿದೆ. ದೀಪಾವಳಿ ಲಕ್ಷ್ಮಿ ಪೂಜೆ ದಿನ ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ, ತುಳಸಿ ಎಲೆಗಳ ಮಾಲೆ ಸಿದ್ಧಪಡಿಸಿ ಅದನ್ನು ತಾಯಿ ಲಕ್ಷ್ಮಿಗೆ ಅರ್ಪಿಸಿದೆ ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...