ಹಾಸನ: ಜೆಡಿಎಸ್ ಕಾರ್ಯಾಗಾರಕ್ಕೆ ಗೈರು ಹಾಜರಾದ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಶಾಸಕ ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ.
ಕುಮಾರಣ್ಣ ನನಗೆ ಫೋನ್ ಮಾಡಿ ಸಭೆಗೆ ಆಹ್ವಾನ ನೀಡಿದ್ದಾರೆ. ಭಿನ್ನಾಭಿಪ್ರಾಯ ಬಗೆಹರಿಸಲು ಕ್ಷೇತ್ರದ ಜನರೊಂದಿಗೆ ದೊಡ್ಡ ಸಭೆ ನಡೆಸುತ್ತೇನೆ. ಆ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ನಿರ್ಧರಿಸುತ್ತೇವೆ. ಕ್ಷೇತ್ರದ ಜನರು ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಕುಮಾರಣ್ಣ ನಾನು ಪ್ರತಿದಿನ ನಾಲ್ಕೈದು ಬಾರಿ ಮಾತನಾಡುತ್ತೇವೆ. ಭಿನ್ನಾಭಿಪ್ರಾಯದ ಬಗ್ಗೆ ಇನ್ನೂ ಯಾವುದೇ ಮಾತುಕತೆ ಆಗಿಲ್ಲ. ನಮಗೂ ಅವರಿಗೂ ಏನೇನೋ ಇದೆ. ಅದನ್ನೆಲ್ಲ ಹೇಳಲು ಆಗುತ್ತಾ? ಜನ ಜೆಡಿಎಸ್ ನಲ್ಲೆ ಉಳಿಯಬೇಕು ಎಂದು ಹೇಳಿದರೆ ಜೆಡಿಎಸ್ ಪಕ್ಷದಲ್ಲಿಯೇ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.