ಕೇವಲ ಒಂದು ತಿಂಗಳ ಅವಧಿಯಲ್ಲಿ ಕೇಂದ್ರದ 23 ಸಚಿವರು ತಮಿಳುನಾಡಿಗೆ ಭೇಟಿಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಅಕ್ಟೋಬರ್ 16ರಂದು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಸ್ಮೃತಿ ಇರಾನಿ ಚೆನ್ನೈ ಮತ್ತು ಕೊಯಮತ್ತೂರಿನಲ್ಲಿದ್ದರು. ಕ್ರಮವಾಗಿ ತಮಿಳುನಾಡಿನಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳ ಪ್ರಗತಿಯನ್ನು “ಮೇಲ್ವಿಚಾರಣೆ” ಮಾಡಲು ಬಂದಿದ್ದರು.
ನಂತರ ಅವರು ಆಡಳಿತಾರೂಢ ಡಿಎಂಕೆ ವಿರುದ್ಧ ಅಕ್ರಮಗಳು ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಪಟ್ಟಿ ಮಾಡಿದ್ದಾರೆ. ಕಳೆದ ಐದು ದಶಕಗಳಿಂದ ದ್ರಾವಿಡ ಪಕ್ಷಗಳು ಆಡಳಿತ ನಡೆಸುತ್ತಿದ್ದು, ಬಿಗಿ ಹಿಡಿತ ಸಾಧಿಸಿವೆ. ಇಲ್ಲಿ ಕಣ್ಣಿಟ್ಟಿರುವ ಬಿಜೆಪಿ ಪ್ರಭಾವ ಬೀರಲು ಆರಂಭಿಸಿರುವುದು ಗೌಪ್ಯ ವಿಚಾರವೇನಲ್ಲ.
ಮೂಲಗಳಪ್ರಕಾರ ಮುಂದಿನ 40 ರಿಂದ 50 ದಿನಗಳಲ್ಲಿ, 40ಕ್ಕೂ ಹೆಚ್ಚು ಕೇಂದ್ರ ಸಚಿವರು ಸೇರಿದಂತೆ
ಅತ್ಯಂತ ಪ್ರಭಾವಿ ನಾಯಕರು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕ್ಯಾಬಿನೆಟ್ ನ ಎಲ್ಲಾ 77 ಸಹೋದ್ಯೋಗಿಗಳಿಗೆ ತಮಿಳುನಾಡಿಗೆ ಭೇಟಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.