ಮಸಾಲೆಯಾಗಿ ನಾವು ಲವಂಗವನ್ನು ಬಳಕೆ ಮಾಡ್ತೇವೆ. ಬರೀ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಲವಂಗವನ್ನು ಇನ್ನೂ ಅನೇಕ ಕೆಲಸಕ್ಕೆ ಬಳಕೆ ಮಾಡಬಹುದು. ಲವಂಗವನ್ನು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ. ಹಾಗೆಯೇ ಲವಂಗದ ಕೆಲವು ತಂತ್ರಗಳು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ.
ಯಾವುದೇ ಕೆಲಸ ಸ್ಥಗಿತಗೊಂಡಿದ್ದರೆ ಅಥವಾ ದೀರ್ಘಕಾಲದವರೆಗೆ ಮಾಡಲು ಸಾಧ್ಯವಿಲ್ಲ ಎಂದಾದ್ರೆ ಲವಂಗದ ಉಪಾಯ ಮಾಡಬಹುದು. ಲವಂಗ, ಏಲಕ್ಕಿ ಮತ್ತು ವೀಳ್ಯದೆಲೆಯಲ್ಲಿ ಸುತ್ತಿ ಗಣೇಶನಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತದೆ. ಜೀವನ ಯಶಸ್ವಿಯಾಗುತ್ತದೆ.
ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ದರೆ, ಅದನ್ನು ಹೋಗಲಾಡಿಸಲು ಕೂಡ ನೀವು ಲವಂಗ ಬಳಕೆ ಮಾಡಬಹುದು. 7 ರಿಂದ 8 ಲವಂಗವನ್ನು ಸುಟ್ಟು ಮನೆಯ ಯಾವುದಾದ್ರೂ ಮೂಲೆಯಲ್ಲಿ ಇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
ಕೆಲಸದಲ್ಲಿ ತೊಂದರೆಯಾಗ್ತಿದೆ ಎಂದಾದ್ರೆ ಪೂಜೆ ಮಾಡುವಾಗ ನೀವು ಎರಡು ಲವಂಗವನ್ನು ಆರತಿ ತಟ್ಟೆಯಲ್ಲಿ ಇಡಿ. ಹೀಗೆ ಮಾಡುವುದರಿಂದ ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಮನೆಯಲ್ಲಿ ಯಾವುದೇ ಗಲಾಟೆ ನಡೆಯುವುದಿಲ್ಲ.
ಲವಂಗ ತುಂಬಾ ಉಪಯುಕ್ತವಾಗಿದೆ. ಕರಿಮೆಣಸು ಮತ್ತು ಲವಂಗವನ್ನು ತಲೆಯ ಮೇಲಿಂದ ದೂರ ಎಸೆಯಬೇಕು. ನಂತ್ರ ಅದನ್ನು ತಿರುಗಿ ನೋಡಬಾರದು. ಇದ್ರಿಂದ ಹಣದ ಕೊರತೆ ಕಡಿಮೆಯಾಗುತ್ತದೆ.