ದೇಹದ ಬೇರೆ ಬೇರೆ ಭಾಗಗಳಲ್ಲಿ ಮಚ್ಚೆಗಳು, ಕಪ್ಪು ಕಲೆಗಳು ಇರುವುದು ಮಾಮೂಲಿ. ಹುಟ್ಟಿನಿಂದ ಇರುವ ಮಚ್ಚೆಗೆ ಬಹಳ ಮಹತ್ವವಿದೆ. ದೇಹದ ವಿವಿಧ ಭಾಗಗಳಲ್ಲಿನ ಮಚ್ಚೆ ಗುರುತುಗಳು ಆ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ತಿಳಿಸುತ್ತದೆ.
ಮೇಲಿನ ತುಟಿಗಳಲ್ಲಿ ಮಚ್ಚೆ ಇದ್ದರೆ ಆ ವ್ಯಕ್ತಿಯಲ್ಲಿ ಇತರರಿಗಿಂತ ಕೆಲಸದಲ್ಲಿ ಆಸಕ್ತಿ ಹೆಚ್ಚು ಎಂದರ್ಥ. ಇವರು ಹೆಚ್ಚು ಕೆಲಸ ಮಾಡುವ ಮನೋಭಾವವನ್ನು ಹೊಂದಿರುತ್ತಾರೆ.
ಎಡಗಣ್ಣಿನಲ್ಲಿ ಮಚ್ಚೆ ಇದ್ದರೆ ಸಂಗಾತಿಯೊಡನೆ ಜಗಳವಾಡುತ್ತಿರುತ್ತಾರೆ. ದಾಂಪತ್ಯ ಜೀವನವು ಉತ್ತಮವಾಗಿಲ್ಲ ಎಂಬುದನ್ನು ತೋರಿಸುತ್ತದೆ.
ಬಲ ಕೆನ್ನೆಯ ಮೇಲೆ ಮಚ್ಚೆ ಇದ್ರೆ ಧನ ಲಾಭ ಎಂದರ್ಥ. ಹಣೆಯ ಮೇಲೆ ಮಚ್ಚೆ ಇರುವುದು ಶ್ರೀಮಂತಿಕೆಯ ಸಂಕೇತ.
ಗಲ್ಲದ ಮೇಲೆ ಇರುವ ಮಚ್ಚೆ ಸಂಗಾತಿಯ ಬಗ್ಗೆ ಗಾಢವಾದ ಪ್ರೀತಿಯನ್ನು ತೋರಿಸುತ್ತದೆ.
ಗಲ್ಲದ ಮೇಲೆ ಮಚ್ಚೆ ಇರುವ ಪುರುಷರ ಕಡೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರೆ.
ನಾಲಿಗೆಯ ಮೇಲೆ ಮಚ್ಚೆ ಇದ್ರೆ ಆತ ಹೇಳಿದ ಮಾತು ಸತ್ಯವವಾಗುತ್ತದೆ ಎಂಬ ನಂಬಿಕೆ ಇದೆ.
ಸೊಂಟದ ಮೇಲೆ ಇರುವ ಮಚ್ಚೆ ಚಂಚಲ ಮನಃಸ್ಥಿತಿಯನ್ನು ಸೂಚಿಸುತ್ತೆ. ಇಂತಹ ವ್ಯಕ್ತಿ ಪದೇ ಪದೇ ಮಾನಸಿಕ ತೊಂದರೆ ಅನುಭವಿಸುತ್ತಾನೆ.
ಮೂಗಿನ ಮೇಲೆ ಮಚ್ಚೆ ಇರುವ ಜನರು ಹೆಚ್ಚು ಪ್ರಯಾಣಿಸುತ್ತಾರೆ.
ಸಾಮಾನ್ಯವಾಗಿ ಹೆಚ್ಚು ಊಟ ಮತ್ತು ನೀರು ಕುಡಿಯುವವರ ಹೊಟ್ಟೆಯ ಮೇಲೆ ಮಚ್ಚೆ ಇರುತ್ತೆ.